Belagavi News In Kannada | News Belgaum

ನಮ್ಮ ಕಷ್ಟ ಕೇಳದವರು, ಓಟು ಕೇಳೋಕೆ ಬಂದ್ರಾ: ಬಿಜೆಪಿ ಅಭ್ಯರ್ಥಿ ಸಾಸನೂರು ಮತದಾರರು ತರಾಟೆ

ವಿಜಯಪುರ: ವಿಧಾನಸಭೆ ಚುನಾವಣೆ ಗೆ ಏಳು ದಿನಗಳು ಬಾಕಿಯಿದ್ದು, ಜಿಲ್ಲೆಯ ದೇವರಹಿಪ್ಪರಗಿ ಬಿಜೆಪಿ ಅಭ್ಯರ್ಥಿ ಸೋಮನಗೌಡ ಸಾಸನೂರು ಎಂಬುವವರು ಪ್ರಚಾರಕ್ಕೆ ತೆರಳಿದ್ದಾರೆ.

ಈ ವೇಳೆ ಕ್ಷೇತ್ರದ ಹಿಟ್ಟಿನಹಳ್ಳಿ ತಾಂಡಾ ಜನರು ಶಾಸಕರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹೌದು ಪ್ರಚಾರಕ್ಕೆ ಬಂದಿದ್ದ ಸೋಮನಗೌಡ ಅವರ ಕಾರಿಗೆ ಮುತ್ತಿಗೆ ಹಾಕಿ, 5 ವರ್ಷಗಳ ಬಳಿಕ ಮತ್ತೆ ಓಟು ಕೇಳೋಕೆ ಬಂದ್ರಾ, ತಾಂಡಾ ಅಭಿವೃದ್ಧಿ ಮಾಡಿಲ್ಲ, ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಸಕರ ಬೆಂಬಲಿಗರು ಹಾಗೂ ತಾಂಡಾ ನಿವಾಸಿಗಳು ಕೈ ಕೈ ಮಿಲಾಯಿಸಿದ್ದಾರೆ.

ಇಷ್ಟೆಲ್ಲಾ ಆಗುತ್ತಿದ್ದರೂ ಶಾಸಕ ಸೋಮನಗೌಡ ಮಾತ್ರ ಕಾರಿನಿಂದ ಹೊರಗಡೆ ಇಳಿದಿಲ್ಲ. ಮತ್ತೆ ಈ ತಾಂಡಾಗೆ ಮತ ಕೇಳಲು ಬರಬೇಡಿ ಎಂದಿದ್ದಾರೆ.//////