ಚಾಕೊಲೇಟ್‌ನಲ್ಲಿ ಚಿನ್ನ ಸಾಗಾಟ: ಆರೋಪಿ ವಶಕ್ಕೆ

ಹೈದರಾಬಾದ್: ಕಳೆದ ಕೆಲವು ದಿನಗಳಿಂದ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಲವಾರು ಕಳ್ಳಸಾಗಣೆ ಘಟನೆಗಳನ್ನು ಪತ್ತೆ ಹಚ್ಚಿದ್ದಾರೆ. ನಿನ್ನೆ ಚಾಕಲೇಟ್ ರ್‍ಯಾಪರ್ ಸುತ್ತಿ ಸಾಗಾಟ ಮಾಡುತ್ತಿದ್ದ 16.5 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿರಿಂದ 16.5 ಲಕ್ಷ ಮೌಲ್ಯದ 269 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಮಂಗಳವಾರ ಬೆಳಗ್ಗೆ ಎಮಿರೇಟ್ಸ್ ವಿಮಾನದಲ್ಲಿ ದುಬೈನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರಿಂದ 269 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ತಂಡವು ವಶಪಡಿಸಿಕೊಂಡಿದೆ. ಅವರ ಬ್ಯಾಗ್‌ನಲ್ಲಿದ್ದ ಬಾಕ್ಸ್‌ನಲ್ಲಿ ಚಾಕೊಲೇಟ್‌ಗಳ ನಡುವೆ ಬಚ್ಚಿಟ್ಟಿದ್ದ ಒಟ್ಟು 13 ಚಿಕ್ಕ ಚಿನ್ನದ ತುಂಡುಗಳು ಪತ್ತೆಯಾಗಿವೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.///////