Belagavi News In Kannada | News Belgaum

ಕನ್ನಡದ ಖ್ಯಾತ ಹಿರಿಯ ನಟ ಶರತ್ ಬಾಬು ಇನ್ನಿಲ್ಲ

ಹೈದ್ರಾಬಾದ್ : ಅನಾರೋಗ್ಯದಿಂದ ಬಳಲುತ್ತಿದ್ದ ಜನಪ್ರಿಯ ಹಿರಿಯ ನಟ ಶರತ್ ಬಾಬು ಅವರು ಇಂದು ಚಿಕಿತ್ಸೆ ಫಲಕಾರಿಯಾಗಿದೇ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕನ್ನಡ ಸೇರಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟ ಶರತ್ ಬಾಬು ಅವರು ಅನಾರೋಗ್ಯದ ಕಾರಣ ಕಳೆದ ತಿಂಗಳು 20 ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಲಿವರ್, ಕಿಡ್ನಿ, ಶ್ವಾಸಕೋಶಗಳಿಗೆ ತೊಂದರೆಯಾಗಿದ್ದು, ದೇಹದ ಅಂಗಾಂಗಗಳು ಉರಿಯೂತಕ್ಕೆ ತುತ್ತಾಗಿದ್ದವು ಎಂದು ವೈದ್ಯರು ತಿಳಿಸಿದ್ದಾರೆ./////