Belagavi News In Kannada | News Belgaum

ಇಂದು ಬೆಳಗಾವಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಭೇಟಿ

ಬೆಳಗಾವಿ: ಈಗಾಗಲೇ ಚುನಾವಣಿಗೆ ಕೇಲವೆ ದಿನಗಳು ಬಾಕಿ ಉಳದಿದ್ದು ಪ್ರಚಾರ ಕಾರ್ಯ ಎಲ್ಲಡೆ ಭರ್ಜರಿಯಾಗಿ ನಡೆಯುತ್ತಿದೆ. ಮಾಜಿ ಸಿಎಂ  ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ.
ಇಂದು ಬೆಳಗಾವಿಗೆ ಆಗಮಿಸಲಿರುವ ಜಗದೀಶ ಶೆಟ್ಟರ ಕಾಂಗ್ರೆಸ್ ಅಭ್ಯರ್ಥಿ ಆಸೀಪ್ ರಾಜು ಸೇಠ್ ಪರವಾಗಿ ಪ್ರಚಾರ ಸಭೆ ನಡೆಸಿ ಮತಶಿಕಾರಿಗೆ ಇಳಿಯಲಿದ್ದಾರೆ. ಮಾಹಾಂತೇಶ ನಗರ, ಶ್ರೀನಗರ, ಆಂಜನೆಯ ನಗರ ಹಾಗೂ ರಾಮತೀರ್ಥ ನಗರಗಳ ಲಿಂಗಾಯತ ಪ್ರಾಬಲ್ಯ ಹೆಚ್ಚಿರುವ ಪ್ರದೇಶಗಳಲ್ಲಿ ನಾಳೆ ಸಂಜೆ 5.30 ಕ್ಕೆ ಮಹಾಂತ ಭವನದಲ್ಲಿ ಪ್ರಚಾರ ಸಭೆ ಕೈಗೊಳ್ಳಲಿದ್ದಾರೆ.ಜಗದೀಶ್ ಶೆಟ್ಟರ ಆಗಮನದಿಂದ ಕಾಂಗ್ರೆಸ್ ಅಭ್ಯರ್ಥಿ ಆಸೀಪ್ ರಾಜು ಸೇಠ್ ಅವರಿಗೆ ಮತ್ತಷ್ಟು ಬಲ ಬಂದಂತಾಗುತ್ತದೆ. ಒಟ್ಟಿನಲ್ಲಿ ಇಂದು  ನಗರಕ್ಕೆ ಆಗಮಿಸಲಿರು ಲಿಂಗಾಯ ಹಿರಿಯ ನಾಯಕ ಜಗದೀಶ ಶೆಟ್ಟರ ಆಗಮನದಿಂದ ಬೆಳಗಾವಿಯ ಉತ್ತರ ಕಾಂಗ್ರೇಸ್ ಮತಕ್ಷೇತ್ರಕ್ಕೆ ವರವಾಗಲಿದೆಯೆ ಕಾದುನೋಡಬೇಕಾಗಿದೆ./////