ಕೃಷ್ಣಾ ಆನಿಗೋಳ್ಕರ್ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆ

ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಹಲವಾರು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ರಾಜ್ಯ ಉಣ್ಣೆ ನಿಗಮದ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣ ಆನಿಗೋಳ್ಕರ್, ಬೀರಾ ಆನಿಗೋಳ್ಕರ್ ಹಾಗೂ ಶಿಂದೋಳ್ಳಿ ಗ್ರಾಮದ ಸುತ್ತಮುತ್ತಲಿನ ಅನೇಕ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿಠ್ಠಲ ಸಾಂಬ್ರೇಕರ್, ರಮೇಶ ಸಾಂಬ್ರೇಕರ್, ಮುಖಂಡರಾದ ರಾಘವೇಂದ್ರ ಕೋಲ್ಕಾರ, ಬಾಗು ಕರೆಗಾರ, ವಿಠ್ಠಲ ಬೆಳಗಾಂವ್ಕರ್, ಭರಮಾ ಬೆಳಗಾಂವ್ಕರ್, ಮಹಾಂತೇಶ ಕೆಂಗೇರಿ, ರಮೇಶ ಆನಿಗೋಳ್ಕರ್, ಬಾಗಪ್ಪ ಆನಿಗೋಳ್ಕರ್, ಬಸವರಾಜ ಅಗಸಿಮನಿ ಮೊದಲಾದವರು ಕಾಂಗ್ರೆಸ್ ಸೇರಿದರು./////