ಬಿಜೆಪಿಯವರದ್ದು 40 ಪರ್ಸೆಂಟ್ ಸರ್ಕಾರ, ಅದು ತೊಲಗಬೇಕು,, :ಮಾಜಿ ಸಚಿವ ಜೈರಾಮ್

ಬೆಳಗಾವಿ : ಶನಿವಾರ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಕೇಂದ್ರ ಸಚಿವರಾದ ರಮೇಶ ಜೈರಾಮ್ ಅವರು ಭಾಗಿಯಾಗಿ ಈ ಮೇಲಿನಂತೆ ತಿಳಿಸಿದ್ದಾರೆ,
2023ರ ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಸಿಗುತ್ತದೆ, ಯಾಕಂದರೆ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಿಂದ ಪಕ್ಷಕ್ಕೆ ಸಂಜೀವಿನಿ ದೊರೆತಿದೆ.
ಪ್ರತಿ ಜಿಲ್ಲೆ, ರಾಜ್ಯದಲ್ಲಿ ಜನತೆಗೆ ಬೇಟಿ ಮಾಡಿ, ಅವರ ಸಮಸ್ಯ ಆಲಿಸಿ, ಜನರನ್ನು ಪಕ್ಷದತ್ತ ಸೆಳೆದಿದ್ದೇವೆ, ಅದಕ್ಕಾಗಿ ಜನರು ಇಂದು ಕಾಂಗ್ರೆಸ್ ಪಕ್ಷದ ಹಿಂದೆ ಬರುತ್ತಿದ್ದಾರೆ
ಕರ್ನಾಟಕ ರಾಜ್ಯದ ಸ್ತಂತ ಆದಾಯ ಇದ್ದಾಗ ಇದು ಹೇಗೆ ಡಬಲ್ ಇಂಜಿನ್ ಸರ್ಕಾರ ಆಗುತ್ತೆ ಎಂದು ಪ್ರಶ್ನೆ ಮಾಡಿದರು, ಬೋಗಸ್ ಡಬಲ್ ಇಂಜಿನ್ ಸರ್ಕಾರ, ಬಿಜೆಪಿಯ ಇದು ಟ್ರಬಲ್ ಇಂಜಿನ್ ಸರ್ಕಾರ, 40 ಪರ್ಸೆಂಟಿಸ್ ಸರ್ಕಾರ ಕರ್ನಾಟಕದಿಂದಲೆ ಪ್ರಾರಂಭವಾಗಿದೆ, ಅದರಿಂದ ಕರ್ನಾಟಕ ಮುಕ್ತ ಆಗಬೇಕು ಅದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಇಂದು ಜನಬೆಂಬಲ ಸಿಗ್ತಾ ಇದೆ ಎಂದರು
ಈ ಚುನಾವಣೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಅಲ್ಲಾ, ಅದೇ ಬೇರೆ ಇದೇ ಬೇರೆ, ಲೋಕಸಭೆ ಬೇರೆ, ವಿಧಾನ ಸಭೆ ಚುನಾವಣೆ ಬೇರೆ, ಇದು ಹಿಂದೆ ಸಾಬೀತಾಗಿದೆ, ಪ್ರಧಾನಿ ಬಂದು ರೋಡ್ ಶೋ ಮಾಡಲಿ, ಆದರೆ ಅದರಿಂದ ಪರಿಣಾಮ ಆಗೋಲ್ಲ, ಜನರು ರಾಜ್ಯ ನಾಯಕರನ್ನು, ತಮ್ಮ ಶಾಸಕ ಅಭ್ಯರ್ಥಿಯನ್ನು ನೋಡಿ ಮತ ನೀಡುವರು ಎಂದರು.
ಲೋಕಸಭಾ ಚುನಾವಣೆ ಅಂತೆ ಕೇಂದ್ರ ನಾಯಕರು ಬಂದು ಪ್ರಚಾರ ಮಾಡಿದರೆ, ಜನ ಮರುಲಾಗೊದಿಲ್ಲ, ಈ ಬಿಜೆಪಿ ಕಮಿಷನ್ ಸರ್ಕಾರ ಹೋಗುತ್ತೆ, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದು, ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತೆ ಎಂದರು.