Belagavi News In Kannada | News Belgaum

ವಿಶ್ವಕರ್ಮ ಸಮಾಜದ ಬಂದುಗಳಿಂದ ರಮೇಶ ಜಾರಕಿಹೋಳಿಗೆ ಬೆಂಬಲ

ಗೋಕಾಕ:ವಿಶ್ವಕರ್ಮ ಸಮಾಜದ ಬಾಬು ಪತ್ತಾರ ನೇತ್ರತ್ವದಲ್ಲಿ ತಾಲೂಕಿನ ಎಲ್ಲಾ ವಿಶ್ವಕರ್ಮ ಸಮಾಜದ ಬಂದುಗಳಿಂದ ರಮೇಶ ಜಾರಕಿಹೋಳಿಗೆ ಬೆಂಬಲ ಹೌದು ವಿಧಾನಸಭೆ ಸಭೆ ಚುನಾವಣೆ ಸಮೀಸುತ್ತಿದ್ದಂತೆ ಎಲ್ಲಾ ಸಮಾಜದ ಮುಖಂಡರುಗಳು ಪ್ರಚಾರ ಮಾಡಲು ಸನ್ನದ್ದರಾಗಿದ್ದಾರೆ ಇಂದು ಗೋಕಾಕ ಮತಕ್ಷೇತ್ರದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳಿಂದ ಚುನಾವಣೆ ಪ್ರಚಾರದಲ್ಲಿ ರಮೇಶ ಜಾರಕಿಹೋಳಿಯವರಿಗೆ ಏಕಮತವಾಗಿ ಬೆಂಬಲ ನೀಡುವ ಮೂಲಕ ಮನೆ ಮನೆಗೆ ಹಾಗೂ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಕೈಗೊಂಡಿದ್ದರು.

ಬಿಜೆಪಿ ಮಾಡಿದ ಕೆಲಸ ವಿಶ್ವಕರ್ಮರಿಗೆ ಹಲವು ಯೋಜನೆ ಗಳೊಂದಿಗೆ ವಿಶ್ವಕರ್ಮ ಸಮಾಜ ಗುರುತುಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಬಾಬು ಪತ್ತಾರ ಪ್ರಚಾರ ಸಂದರ್ಭದಲ್ಲಿ ಸಮಾಜದ ಬಂದು ಬಗಿನಿಯರಿಗೆ ವಿಷಯ ತಿಳಿಸಿ ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿಗೆ ಬೆಂಬಲ ನೀಡಿ ಬಹುಮತಗಳಿಂದ ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.ಪ್ರಚಾರ ಸಂದರ್ಭದಲ್ಲಿ ಅಂಭಿರಾವ ಪಾಟೀಲರು ಭೆಟಿ ನೀಡಿ ಸಮಾಜದ ಮುಖಂಡರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.ನಂತರ ಶಾಲು ಮಾಲೆ ಹಾಕುವ ಮುಖಾಂತರ ರಮೇಶ ಜಾರಕಿಹೊಳಿಗೆ ಜೈ ಅಂದಿದ್ದಾರೆ.ಬೆಂಗಳೂರಿನಿಂದ ಬಂದು ಹೈವೊಲ್ಟೇಜ ಮತಕ್ಷೇತ್ರವಾದ ಗೋಕಾಕನಲ್ಲಿ ಮತ ಭೆಟೆಗೆ ಸಕಲ ಸಿದ್ದತೆ ಮಾಡಿಕೊಂಡು ಹಲವೂ ಗ್ರಾಮದ ವಿಶ್ವಕರ್ಮ ಸಮಾಜದ ಮುಖಂಡರಿಗೆ ಪ್ರತ್ಯೇಕವಾಗಿ ಬಿಜೆಪಿಗೆ ಮತ ಹಾಕುವಂತೆ ಬೇಡಿಕೊಂಡಿದ್ದಾರೆ.

ಅದೇ ರೀತಿ ಎಲ್ಲಾ ವಿಶ್ವಕರ್ಮ ಸಮಾಜದ ಮುಖಂಡರಿಗೆ ಎಲ್ಲಾ ರೀತಿಯ ಸರ್ಕಾರದ ಸೌಲಭ್ಯಗಳನ್ನು ಒದಗಿಸುತ್ತೆವೆ ಇನ್ನೂ ಮುಂದಿನ ಹಂತದಲ್ಲಿ ನಿರುದ್ಯೋಗ ಯುವಕರಿಗೆ ಕೆಲಸ,ಬಡಿಗೇರ,ಕಂಬಾರ,ಪತ್ತಾರ,ಸುತಾರ,ಹೀಗೆ ಸಾಲ ಸೌಲಭ್ಯ ಒದಗಿಸುತ್ತೆವೆಂದು ಬಾಬು ಪತ್ತಾರ ಹೇಳಿದ್ದಾರೆ.ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ನಿಗಮ ಮಂಡಳಿ ಅಧ್ಯಕ್ಷರಾದ ಬಾಬು ಪತ್ತಾರ.ಹಾಗೂ ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿ ಬೆಂಗಳೂರು ಮಂಗಳೂರು ಕಲಬುರಗಿ ವಿಜಯಪುರ ಬೆಳಗಾವಿ ಹುಬ್ಬಳ್ಳಿ ಧಾರವಾಡ ಹೀಗೆ ಎಲ್ಲಾ ಜಿಲ್ಲೆಯ ಸಮಸ್ಯೆಗೆ ಒಡೊಡಿ ಬರುವ ಏಕೈಕ ಸಮಾಜದ ಹೋರಾಟಗಾರ ಹಾಗೂ ವಿಶ್ವಕರ್ಮ ಸಮಾಜದ ಹಲವೂ ಸಭೆಗಳಿಗೆ ಮೂಲ ಕಾರ್ಯಕರ್ತರಾದ ಸಂತೋಷ ಪತ್ತಾರ (ಸಂತೋಷ ಪಿ ಕೆ) ವಿಶ್ವಕರ್ಮ ಸಮಾಜದ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷಾರದ ಉಮೇಶ ಪತ್ತಾರ, ಡಾ! ರಾಘವೇಂದ್ರ ಪತ್ತಾರ ಖ್ಯಾತ ವೈದ್ಯರು ಘಟಪ್ರಭಾ, ಸಮಾಜದ ಯುವ ಮುಖಂಡರು ಹಾಗೂ ಗೊಕಾಕ ಹುಕ್ಕೇರಿ ಚಿಕ್ಕೊಡಿ ತಾಲೂಕಿನ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಪತ್ತಾರ ಹೀಗೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.