Belagavi News In Kannada | News Belgaum

ಆಮಿಷಕ್ಕೆ ಮರುಳಾಗದಿರಿ ಯೋಚಿಸಿ ಮತ ಚಲಾಯಿಸಿ: ವಿವಿಧ ಘೋಷಣೆಗಳ ಮೂಲಕ ಮತಜಾಗೃತಿ ಕಾಲ್ನನಡಿಗೆ ಜಾಥಾ

ಬೆಳಗಾವಿ : ಜಿಲಾ ್ಲಪಂಚಾಯತ ಹಾಗೂ ಸಾಗರ ಕಾಲೇಜಿನ ವತಿಯಿಂದ ನಗರದ ಬೋಗಾರವೇಸ ವೃತ್ತದಲಿ ್ಲಶನಿವಾರ ಮೇ.6 ರಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ ಭೋಯರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನನ್ನ ಮತ ಮಾರಾಟಕಿಲ್ಲ, ಮತದಾನದಿಂದ ವಂಚಿತರಾಗಬೇಡಿ, ನಮ್ಮ ಮತ ನಮ್ಮ ಹಕ್ಕು, ಆಮಿಷಕ್ಕೆ ಮರುಳಾಗದಿರಿ ಯೋಚಿಸಿ ಮತ ಚಲಾಯಿಸಿ, ಆಮಿಷಗಳನ್ನು ನಿರಾಕರಿಸಿ ನಿಮ್ಮಷ್ಟದಂತೆ ಚಲಾಯಿಸಿ, ಪ್ರತಿ ಮತವು ಅಮೂಲ್ಯ ತಪ್ಪದೇ ಮತ ಚಲಾಯಿಸಿ ಎಂದು ವಿವಿಧ ಮತಜಾಗೃತಿ ಘೋಷಣೆಗಳನ್ನು ಕೂಗುವುದರ ಮುಖಾಂತರ ಸಾರ್ವಜನಿಕರಲಿ ್ಲಮತಜಾಗೃತಿ ಮೂಡಿಸಲಾಯಿತು.
ಮತದಾನ ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ನಗರದ ಬೋಗಾರವೇಸ, ಮಾರುತಿಗಲ್ಲಿ, ಗಣಪತಿಗಲ್ಲಿ ಹಾಗೂ ಶನಿವಾರಕೂಟದ ಮೂಖಾಂತರ ರಾಣಿ ಚೆನ್ನಮ್ಮವೃತ್ತಕ್ಕೆ ಬಂದು ಮುಕ್ತಾಯವಾಯಿತು.
ಜಿಲಾ ್ಲಪಂಚಾಯತ ಯೋಜನಾ ನಿರ್ದೇಶಕರಾದ ರವಿಬಂಗಾರೆಪ್ಪನವರ, ಸಾಗರ ಬಿ.ಎಡ್.ಕಾಲೇಜಿನ ಪ್ರಾಚಾರ್ಯರಾದ ಆರ್.ವ್ಹಿ.ಹಳಬ, ಡಾ.ಟಿ.ಎಂ.ನೌಕುಡಕರ, ವಿನಾಯಕಮೊರೆ, ಎನ್.ಐ. ಸನದಿ, ಡಿ. ಎಂ.ಚವ್ಹಾನ, ಎಂ.ಬಿ.ನರಸನ್ನವರ, ಎಂ.ಎಸ್.ಹಿರೇಮಠ, ಜಿಲಾ ್ಲಎಸ್.ಬಿ.ಎಂ ಸಮಾಲೋಚಕರಾದ ಬಾಹುಬಲಿ ಮೆಳವಂಕಿ, ತಾಲ್ಲೂಕು ಐಇಸಿ ಸಂಯೋಜಕರಾದ ರಮೇಶ ಮಾದರ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳು ಇದ್ದರು./////