ಕಿವುಡು ಮಕ್ಕಳ ಸರ್ಕಾರಿ ಶಾಲೆಯ ಮಕ್ಕಳ ಸಾಧನೆ

ಬೆಳಗಾವಿ: ಪ್ರಸಕ್ತ ಶೈಕ್ಷಣಿಕ 2022-23 ನೇ ಸಾಲಿಗ ಎಸ್ ಎಸ್ ಎಲ್,ಸಿ ಪರೀಕ್ಷೆ ಯಲ್ಲಿ ಒಟ್ಟು 21 ವಿದ್ಯಾರ್ಥಿಗಳು ಹಾಜರಾಗಿದ್ದು 12 ವಿದ್ಯಾರ್ಥಿಗಳು A ಮತ್ತು9 ವಿದ್ಯಾರ್ಥಿಗಳು B+ ಗ್ರೇಡ್ ಪಡೆದುಕೊಂಡು 100 ಪ್ರತಿಶತ ಫಲಿತಾಂಶ ಬಂದಿರುತ್ತದೆ. ಕುಮಾರಿ ಅರ್ಪಿತಾ ಧರಗೊಂಡ ಕುಂಬಾರ ಪ್ರತಿಶತ 83.53 ಅಂಕ ಪಡೆದು ಪ್ರಥಮ ಸ್ಥಾನ ಕುಮಾರಿ ಸಂಗೀತಾ ಧರೆಣ್ಣವರ ಪ್ರತಿಶತ 81.65ಅಂಕ ಪಡೆದು ದ್ವಿತೀಯ ಸ್ಥಾನ
ಕುಮಾರಿ ಪೂರ್ಣಿಮಾ ಆನಂದ ಸುಣಕುಂಪಿ ಪ್ರತಿಶತ 80 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ ಮಕ್ಕಳ ಸಾಧನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿಯ ಉಪನಿರ್ದೇಶಕರಾದ ಶ್ರೀ ಬಸವರಾಜ ಅವರು ಹಾಗೂ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಾದ ನಾಮದೇವ ಬಿಲ್ಕರ ,ಕಿವುಡು ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕರಾದ ಮಂದಾಕಿನಿ ವಂಡಕರ ,ಶಿಕ್ಷಕರಾದ ಎಸ್ ಬಿ ಪಾಟೀಲ್,ರತ್ನಮ್ಮ.ಪಿ ಪದ್ಮಶ್ರೀ ಸಿ, ಪ್ರದಸ ಗಾಯತ್ರಿ ಕಡಬೂರ ಹಾಗೂ ಇತರ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಅಭಿನಂದಿಸಿ ಹಾರೈಸಿದ್ದಾರೆ.//////