ಯುವಜೋಡಿಗಳ ಶವಗಳ ಮರಣೋತ್ತರ ಪರೀಕ್ಷೆಯ ನಂತರ ಕೊಲೆಯಂದು ಸಾಬೀತು ಹೆಚ್ಚಿನ ತನಿಖೆ ಮುಂದುವರೆದಿದೆ

ಖಾನ್ಪುರ : ಮರಣೋತ್ತರ ಪರೀಕ್ಷೆಯ ನಂತರ ಕೊಲೆ ಎಂದು ತಿಳಿದುಬಂದ ನವ ಜೋಡಿಗಳ ಕೊಲೆ ಈ ಮೊದಲು
ಯುವ ಜೋಡಿಯೊಂದು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಉನ್ನಾವೋದಲ್ಲಿ ನಡೆದಿದೆ.
ಪ್ರಿಯಕರನ ಸಹಿತ ಯುವತಿಯ ಮೃತದೇಹ ಮರದಲ್ಲಿ ನೇತಾಡುತ್ತಿತ್ತು ಎಂದು ತಿಳಿದು ಬಂದಿದೆ. ಇವರಿಬ್ಬರೂ ಭಿನ್ನ ಜಾತಿಗೆ ಸೇರಿದವರಾಗಿದ್ದರಿಂದ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಜೋಡಿ ಆರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿತ್ತು. ಆದರೆ ಯುವಕ ಪರಿಶಿಷ್ಠ ಜಾತಿಗೆ ಸೇರಿದ್ದರಿಂದ ಈ ಜೋಡಿಯ ವಿವಾಹಕ್ಕೆ ಯುವತಿಯ ಕುಟುಂಬ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ..
ಇತ್ತೀಚೆಗೆ ಇವರು ಪಲಾಯನ ಮಾಡಿದ ಹಿನ್ನಲೆಯಲ್ಲಿ ಯುವತಿಯ ಕುಟುಂಬದವರು ಅಪಹರಣ ಪ್ರಕರಣ ದಾಖಲಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ..
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದು, ತನಿಖೆ ನಡೆಸಿದ ಬಳಿಕ ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿರುವುದು ಮತ್ತು ಯುವಕನ ಕತ್ತು ಮುರಿದ್ದು,
ಹಾಗೂ ದೇಹದ ಮೇಲೆ ಹಲವು ಗಾಯದ ಗುರುತುಗಳಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ತಿಳಿದು ಬಂದಿದೆ…
ಇನ್ನೂ ಇದೀಗ ಯುವತಿಯ ಕುಟುಂಬದ ನಾಲ್ಕು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇನ್ನೂ ಘಟನೆಗೆ ಸಂಬಂಧಪಟ್ಟವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಉನ್ನಾವೋ ಎಸ್ಪಿ ಸಿದಾರ್ಥ ಮೀನಾ ಹೇಳಿದ್ದಾರೆ..