ಕರ್ನಾಟಕ ಫಲಿತಾಂಶ; ದೇವರ ಮೊರೆ ಹೋದ ಪ್ರಿಯಾಂಕಾ ಗಾಂಧಿ

ಶಿಮ್ಲಾ: ಕರ್ನಾಟಕದಲ್ಲಿ ಮತ ಎಣಿಕೆ ನಡೆಯುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬೆಳಗ್ಗೆ ಶಿಮ್ಲಾದ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಶಿಮ್ಲಾದ ಜಖುವಿನ ಹನುಮಾನ್ ದೇವಸ್ಥಾನದಲ್ಲಿ ‘ದೇಶ ಮತ್ತು ಕರ್ನಾಟಕದ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಿದ್ದರು’ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
‘ನಾನು ಅಜೇಯ. ನಾನು ತುಂಬಾ ಆತ್ಮವಿಶ್ವಾಸ ಹೊಂದಿದ್ದೇನೆ.’ ಎಂದು ಕಾಂಗ್ರೆಸ್ ಆತ್ಮವಿಶ್ವಾಸದ ಟ್ವೀಟ್ ಮಾಡಿದೆ.
224 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.//////