Belagavi News In Kannada | News Belgaum

ಜಾಮೀನು ಆದೇಶ ಪ್ರಕಟಣೆಯಲ್ಲಿ ದೀರ್ಘ ವಿಳಂಬ ಕೂಡದು: ಸುಪ್ರೀಂಕೋರ್ಟ್

ಹೊಸದಿಲ್ಲಿ:  ಜಾಮೀನಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆದೇಶವನ್ನು ನೀಡುವುದಕ್ಕೆ ನ್ಯಾಯಾಲಯಗಳು ತುಂಬಾ ವಿಳಂಬ ಮಾಡಬಾರದು ಹಾಗೂ ದೀರ್ಘ ಚರ್ಚೆಗಳಲ್ಲಿ ತೊಡಗಬಾರದು ಎಂದು ಸುಪ್ರೀಂಕೋರ್ಟ್ ಶನಿವಾರ ಅಭಿಪ್ರಾಯಿಸಿದೆ.

ಜಾಮೀನಿಗೆ ಸಂಬಂಧಿಸಿ ನ್ಯಾಯಾಲಯಗಳು ದೀರ್ಘವಾದ ವಿಚಾರಣೆಗಳನ್ನು ನಡೆಸುವುದು ಅಥವಾ ಆದೇಶ ಪ್ರಕಟಣೆಗೆ ವಿಳಂಬಿಸುವುದು ವೈಯಕ್ತಿಕ ಸ್ವಾತಂತ್ರ್ಯದ ಕುರಿತ ಸಾಂವಿಧಾನಿಕ ಜನಾದೇಶವನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂಜಯ್ ಕರೋಲ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ. ಜಾಮೀನು ಹಂತದಲ್ಲಿ ದೀರ್ಘ ವಿಚಾರಣೆಗಳನ್ನು ನಡೆಸುವುದು, ಪ್ರಕರಣದಲ್ಲಿ ಆರೋಪಿಯ ವಿರುದ್ಧ ಪೂರ್ವಾಗ್ರಹವನ್ನು ಪ್ರದರ್ಶಿಸಿದಂತಾಗುತ್ತದೆ ಎಂದು ಅದು ಹೇಳಿದೆ.

ಜಾಮೀನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆದೇಶವನ್ನು ಕಾದಿರಿಸಿದಲ್ಲಿ, ಈ ಕುರಿತ ನಿರ್ಧಾರವನ್ನು ಪ್ರಕಟಿಸುವುದಕ್ಕೆ ದೀರ್ಘ ಸಮಯ ತೆಗೆದುಕೊಳ್ಳಕೂಡದೆಂದು ಅದು ಹೇಳಿದೆ.  2020ರಲ್ಲಿ ಶಿವಸೇನಾ ನಾಯಕ ರಾಹುಲ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಖಾದರ್ ನಾಝಿ ಇಮಾನ್ದಾರ್ನಿಗೆ ಜಾಮೀನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ನ್ಯಾಯಪೀಠವು ಜಾಮೀನು ಆದೇಶಗಳ ಸಂಕ್ಷಿಪ್ತತೆ ಹಾಗೂ ಅವುಗಳ ಘೋಷಣೆಯಲ್ಲಿ ಕ್ಲಪ್ತತೆ ಇರಬೇಕಾದ ಅಗತ್ಯವನ್ನು ಪ್ರತಿಪಾದಿಸಿದೆ.

ಜಾಮೀನು ಕೋರಿ ತಾನು ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ 16 ಪುಟಗಳ ವಿಸ್ತೃತ ಆದೇಶದಲ್ಲಿ ಪ್ರಕರಣದ ಸಾಧಕ ಬಾಧಕಗಳು ಹಾಗೂ ಪುರಾವೆಗಳ ಬಗ್ಗೆ ಚರ್ಚಿಸಿತು. ಆದಾಗ್ಯೂ, ಆದೇಶವನ್ನು ಕಳೆದ ವರ್ಷದ ಜುಲೈನಿಂದ ಸೆಪ್ಟೆಂಬರ್ವರೆಗೆ ಮೂರು ತಿಂಗಳುಗಳವರೆಗೆ ಕಾದಿರಿಸಿತ್ತು. ಎಂದು ಆರೋಪಿ ಖದರ್ ನಝೀರ್ ನ್ಯಾಯಾಲಯಕ್ಕೆ ತಿಳಿಸಿದ್ದನು.

ಪ್ರಕರಣದಲ್ಲಿ ತಾನು ಕೇವಲ ಸಂಚುಗಾರನೆಂದು ಆರೋಪಿಸಲ್ಪಟ್ಟಿದ್ದರೂ, ಮೂರು ವರ್ಷಗಳಿಂದ ಜೈಲಿನಲ್ಲಿರುವುದಾಗಿ ಆತ ಹೇಳಿದ್ದನು. ತನ್ನ ಸಹ ಆರೋಪಿಯನ್ನು 2021ರಲ್ಲಿಯೇ ಬಿಡುಗಡೆಗೊಳಿಸಲಾಗಿತ್ತು ಎಂದು ಆತ ನ್ಯಾಯಾಲಯಕ್ಕೆ ತಿಳಿಸಿದ್ದನು. ಆರೋಪಿ ಖಾದರ್ ನಾಝೀರ್ ಇನಾಂದಾರ್ ಪರವಾಗಿ ನ್ಯಾಯವಾದಿಗಳಾದ ಸಾನಾ ರಾಯೀಸ್ ಖಾನ್ ಹಾಗೂ ಶ್ರೀರಾಮ್ ಪಾರಕ್ಕಟ್ ವಾದಿಸಿದ್ದರು.//////