ಸೋತ ಮೇಲೆ ಬಿಎಸ್ವೈ ಕಾಲ್ ಮಾಡಿಲ್ಲ: ವಿ. ಸೋಮಣ್ಣ ಭಾವುಕ

ವಿಜಯನಗರ: ಹೈಕಮಾಂಡ್ ಕೊಟ್ಟ ಕೆಲಸ ಮಾಡಿದ್ದೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಭಾವುಕರಾದರು. ಈ ಸಂಬಂಧ ಮಾತಾಡಿದ ವಿ. ಸೋಮಣ್ಣ, ಎರಡು ಕ್ಷೇತ್ರಗಳಲ್ಲೂ ಹೀನಾಯ ಸೋಲಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ ಎಂದರು.
ಚಿನ್ನದಂತ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಹೋಗಿದ್ದೇನೆ. ದಿನ ಬೆಳಗ್ಗೆ ಎದ್ದು ಜನಕ್ಕೆ ಸಹಾಯ ಮಾಡುತ್ತಿದ್ದೆ. ಸೋಲಿನ ಬಳಿಕ ಹೊಸ ಕೆಲಸ ಹುಡುಕಬೇಕಿದೆ. ನನಗೆ ಸೋಲನ್ನು ಅರಗಿಸಿಕೊಳ್ಳುವ ಶಕ್ತಿಯಿದೆ ಎಂದರು.
ಸಿಎಂ ಪರಿಸ್ಥಿತಿಯನ್ನು ಅವಲೋಕನ ಮಾಡಿ ಬಂದಿದ್ದಾರೆ. ನಾನು ಯಾವುದೇ ಅವಕಾಶಗಳು ಬೇಕು ಎಂದು ಕೇಳಿದವನಲ್ಲ. ಪಕ್ಷ ಹೇಳಿದ್ದನ್ನು ಮಾಡಿದ್ದೇನೆ. ಯಾರು ತೆಗೆದುಕೊಳ್ಳ ರಿಸ್ಕ್ ಮಾಡಿದ್ದೇನೆ. ಕೆಲವೊಮ್ಮೆ ಒಳ ಏಟುಗಳ ಬಿದ್ದಾಗ ಹೀಗೆ ಆಗುತ್ತದೆ ಎಂದು ಹೇಳಿದರು.
ಕಾಲವೇ ಪ್ರತಿಯೊಂದಕ್ಕು ಉತ್ತರ ನೀಡಲಿದೆ. ನನಗೆ ಇದುವರೆಗೂ ಯಡಿಯೂರಪ್ಪ ಕರೆ ಮಾಡಿಲ್ಲ. ಚುನಾವಣೆಗೆ ಮುನ್ನ ಪ್ರತೀ ದಿನ ಕಾಲ್ ಮಾಡುತ್ತಿದ್ದರು. ಎಲೆಕ್ಷನ್ ಮುಗಿದ ಮೇಲೆ ಇಲ್ಲ. ನಾನು 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ನನಗೆ ಯಾರು ಧೈರ್ಯ ತುಂಬುವ ಅಗತ್ಯ ಇಲ್ಲ ಎಂದರು.//////