Belagavi News In Kannada | News Belgaum

ತಂದೆಗೆ ಗೆಲುವು, ಮಗನಿಗೆ ಸೋಲು ದಯಪಾಲಿಸಿದ ರಾಮನಗರದ ಮುಸ್ಲಿಂ ಮತಗಳು

ರಾಮನಗರ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ತರೆ ಬಿದ್ದಿದ್ದು, ಮತ ಸಮರದಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆದು ಗೆದ್ದುಬೀಗಿದ್ದು. ಮುಖ್ಯಮಂತ್ರಿ ಸ್ಥಾನಕ್ಕೆ ಹಗ್ಗಜಗ್ಗಾಟ ನಡೆದು ಅಂತಿಮವಾಗಿ ಸಿಎಂ ಸ್ಥಾನದ ಚಂಡು ದೆಹಲಿ ಅಂಗಳದಲ್ಲಿದೆ ಮುಖ್ಯಮಂತ್ರಿ ಯಾರು ಎಂಬುದು ಇನ್ನೂ ಇತ್ಯರ್ಥವಾಗಿಲ್ಲ.

ಇತ್ತ ಕ್ಷೇತ್ರದಲ್ಲಿ ಗೆಲುವು ಮತ್ತು ಸೋಲಿನ ಲೆಕ್ಕಾಚಾರ ಆರಂಭವಾಗಿದ್ದು. ಪ್ರತಿ ಕ್ಷೇತ್ರದಲ್ಲೂ ಅಭ್ಯರ್ಥಿಗಳು ತಮ್ಮ‌ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಪರಿಶೀಲನೆ ಮುಂದಾಗಿದ್ದಾರೆ‌. ಅಕ್ಕಪಕ್ಕದ ಕ್ಷೇತರದಲ್ಲಿ ಅಪ್ಪ ಮತ್ತು ಮಗ ಸ್ಪರ್ದೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬರಿಗೆ ಸಿಹಿ, ಮತ್ತೊಬ್ಬರಿಗೆ ಕಹಿ ಅನುಭವವಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸುಮಾರು 15 ಸಾವಿರ ಮತಗಳ ಅತರದಲ್ಲಿ ಎರಡನೇ ಬಾರಿಗೆ ಗೆಲುವನ್ನು ಸಾಧಿಸಿದ್ದರು. ಇನ್ನೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೆಲುವಿನಲ್ಲಿ ತಾಲ್ಲೂಕಿನ ಅಲ್ಪಸಂಖ್ಯಾತ ಮುಸ್ಲಿಂ ಮತಗಳು ನಿರ್ಣಾಯಕವಾಗಿ ಪಾತ್ರ ವಹಿಸಿವೆ‌.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕರ್ಮ ಭೂಮಿ ರಾಮನಗರ ಕ್ಷೇತ್ರದಿಂದ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸುಮಾರು 11 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡರು. ನಿಖಿಲ್ ಕುಮಾರಸ್ವಾಮಿ ಸೋಲಿಗೆ ಅಲ್ಪಸಂಖ್ಯಾತ ಮುಸ್ಲಿಂ ಮತಗಳು ಕಾರಣವಾಗಿವೆ ಎನ್ನಲಾಗಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಸುಮಾರು 17 ಸಾವಿರಕ್ಕೂ ಹೆಚ್ಚು ಮತಗಳು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪರ ಚಲಾವಣೆ ಮಾಡುವ ಮೂಲಕ ಗೆಲುವಿನ ಸಿಹಿ ನೀಡಿದರು. ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸುಮಾರು 18 ಸಾವಿರಕ್ಕೂ ಹೆಚ್ಚೂ ಮುಸ್ಲಿಂ ಮತಗಳು ಚಲಾವಣೆಯಾದ ಹಿನ್ನಲೆಯಲ್ಲಿ ನಿಖಿಲ್ ಕುಮಾರಸ್ವಾಮಿ 11‌ ಸಾವಿರ ಮತಗಳ ಅಂತರದಲ್ಲಿ‌ ಸೋಲುಂಡರು.

ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2,16,061 ಮತದಾರರಲ್ಲಿ 1,81,695 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಕ್ಷೇತ್ರದಲ್ಲಿ ಸರಸಸರಿ 84.89% ಮತದಾನ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಎ.ಇಕ್ಬಾಲ್ ಹುಸೇನ್ 87,690 ಮತ ಪಡೆದರೆ
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 76,975 ಮತ ಪಡೆದರು. ನಿಖಿಲ್ ವಿರುದ್ಧ ಇಕ್ಬಾಲ್ ಹುಸೇನ್‌ ಗೆಲುವು ಕಂಡಿದ್ದಾರೆ.///////