ದಿ ಕೇರಳ ಸ್ಟೋರಿ ಉಚಿತ ಶೋಗೆ ಶಾಸಕ ಯತ್ನಾಳ್ ವ್ಯವಸ್ಥೆ

ವಿಜಯಪುರ: ವಿಧಾನಸಭೆ ಚುನಾವಣೆ ಬಿಟ್ಟರೆ ತಿಂಗಳಿಂದ ಸದ್ದು ಮಾಡುತ್ತಿರುವ ವಿಷಯ ದಿ ಕೇರಳ ಸ್ಟೋರಿ ಸಿನಿಮಾ. ಅದಾ ಶರ್ಮಾ ನಟನೆಯ ಚಿತ್ರ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ತನ್ನ ಹವಾ ಮುಂದುವರಿಸುತ್ತಿದೆ. ಇದೀಗ ಕೇರಳ ಸ್ಟೋರಿ ನೋಡಲು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚಿತ ವ್ಯವಸ್ಥೆ ಮಾಡಿದ್ದಾರೆ.
ವಿಜಯಪುರ ನಗರದ ಅಪ್ಸರಾ ಚಿತ್ರಮಂದಿರದಲ್ಲಿ 12 ಗಂಟೆಯ ಶೋವನ್ನು ಪ್ರೇಕ್ಷಕರು ಉಚಿತವಾಗಿ ನೋಡಬಹುದಾಗಿದೆ. ಮಂಗಳವಾರ, ಬುಧವಾರ ಹಾಗೂ ಶುಕ್ರವಾರ 3 ದಿನಗಳ ಕಾಲ ಉಚಿತವಾಗಿ ಪ್ರೇಕ್ಷಕರು ವೀಕ್ಷಿಸಲು ಅನುವು ಮಾಡಿ ಕೊಡಲಾಗಿದೆ. ಇದರಿಂದ ಪ್ರೇಕ್ಷಕರು ಖುಷ್ ಆಗಿದ್ದಾರೆ. ಸೋಮವಾರ ಉಡುಪಿಯ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕೇರಳ ಸ್ಟೋರಿ ಚಿತ್ರದ ಪ್ರಚಾರ ಕಾರ್ಯ ಭಿನ್ನವಾಗಿ ನಡೆದಿದೆ. ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳದ ಭಕ್ತರೇ ಹೆಚ್ಚು. ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ಚಿತ್ರ ನೋಡಿ ಎಂದು ಬರೆಯಲಾದ ಬೋರ್ಡ್ ಪ್ರವಾಸಿಗರ ಗಮನ ಸೆಳೆದಿದೆ.
ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿತ್ರಕ್ಕೆ ಅಡೆತಡೆ ಮಾಡಿದ್ದರೂ, ಇತರ ರಾಜ್ಯಗಳು ದಿ ಕೇರಳ ಸ್ಟೋರಿ ಕೈ ಹಿಡಿದಿವೆ. ಈಗಾಗಲೇ ನೂರಾರು ಕೋಟಿ ಗಳಿಕೆ ಮಾಡಿ, ಹಲವು ಕಡೆ ಇನ್ನೂ ತುಂಬಿದ ಪ್ರದರ್ಶನ ಕಾಣುತ್ತಿದೆ.//////