Belagavi News In Kannada | News Belgaum

ಪಾಕ್ ಪರ ಸ್ಟೇಟಸ್ ಹಾಕಿದ್ದ ಯುವಕ ಬಂಧನ

ವಿಜಯಪುರ: ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲಿಮ್ ರಾಷ್ಟ್ರ ಎಂದು ಇನ್‌ಸ್ಟಾಗ್ರಾಂನ ಸ್ಟೇಟಸ್ ಹಾಕಿದ್ದ ಯುವಕ ಇದೀಗ ಅರೆಸ್ಟ್ ಆಗಿದ್ದಾನೆ.
ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ್ದ ಇಬ್ರಾಹಿಂ ಮುರ್ತುಜಸಾಬ್ ಮುಲ್ಲಾ ಬಂಧನಕ್ಕೊಳಗಾಗಿರುವ ಯುವಕ. ಈತ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದವ. ಈತನ ಇನ್‌ಸ್ಟಾಗ್ರಾಂ ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು.  ಸ್ವಯಂಪ್ರೇರಿತ ದೂರನ್ನು ತಾಳಿಕೋಟೆ ಪೊಲೀಸರು ದಾಖಲಿಸಿಕೊಂಡಿದ್ದರು. ಇಬ್ರಾಹಿಂ ಮುರ್ತುಜಸಾಬ್ ಮುಲ್ಲಾನನ್ನು ಬಂಧಿಸಿದ ತಾಳಿಕೋಟೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ./////