ಯುವತಿ ನಾಪತ್ತೆ

ಬೆಳಗಾವಿ, ಮೇ.19: ಕಡೋಲಿ ಗ್ರಾಮದ ನಿವಾಸಿಯಾದ ಅನಿಸಾ ಮೌಲಾಲಿ ಮುಲ್ಲಾ (17) ಇವಳು ಮೇ.10 2023 ರಂದು ಬೆಳಗ್ಗೆ 7.20 ಗಂಟೆ ಸುಮಾರಿಗೆ ಮನೆಯಿಂದ ಹೋದವಳು ಮರಳಿ ಬಂದಿಲ್ಲ ಎಂದು ಇವಳ ತಾಯಿಯಾದ ಮಮತಾಜ ಮೌಲಾಲಿ ಮುಲ್ಲಾ ಅವರು ದೂರು ದಾಖಲಿಸಿದ್ದಾರೆ.
ಕಾಣೆಯಾದ ಹುಡುಗಿಯ ವಿವರ : 5 ಅಡಿ 4 ಇಂಚು ಎತ್ತರ, ಗೋದಿ ಬಣ್ಣ, ಸದೃಡ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು, ಅಗಲ ಮೂಖ, ಉದ್ದ ಮೂಗು ಇದ್ದು, ಮರಾಠಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ ಹಾಗೂ ವೈಟ್ ಕಲರ್ ಪಂಜಾಬಿ ಡ್ರೆಸ್ ಮತ್ತು ಕರಿ ಕಲರ್ ಬುರ್ಖಾ ಧರಿಸಿರುತ್ತಾಳೆ.
ಈ ಪ್ರಕಾರ ಚಹರೆಯುಳ್ಳ ಹುಡುಗಿಯ ಬಗ್ಗೆ ಮಾಹಿತಿ ದೊರೆತಲ್ಲಿ ದೂರವಾಣಿ ಸಂಖ್ಯೆ 0831-2405203, 9480804083, 9480804115 ಗೆ ಸಂಪರ್ಕಿಸಬಹುದು ಎಂದು ಕಾಕತಿ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.