Belagavi News In Kannada | News Belgaum

ಭಾವ ಸಂಗಮ 9 ನೇ ವಾರ್ಷಿಕೋತ್ಸವ

ಬೆಳಗಾವಿ 19- ಭಾವ ಸಂಗಮ 9 ನೆಯ ವಾರ್ಷಿಕ ಸರ್ವ ಸದಸ್ಯರ ಮಹಾಸಮಾಗಮ ಕಾರ್ಯಕ್ರಮವನ್ನು ಇದೇ ದಿ. 21 ರವಿವಾರ ಮುಂಜಾನೆ 10-30 ಕ್ಕೆ ಕೋರ್ಟ ಆವರಣದ ರೇಣುಕಾ ಝೆರಾಕ್ಸ ಹತ್ತಿರವಿರುವ ಸರಕಾರಿ ನೌಕರರ ಭವನದಲ್ಲಿ ಭಾವಸಂಗಮ ಸಂಸ್ಥೆಯವರು ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿ ಮತ್ತು ಶ್ರೀಮತಿ ಶಾರದಾ ಶಾಸ್ತ್ರಿಯವರು ಉದ್ಘಾಟಿಸಲಿದ್ದು ಸರ್ವಾಧ್ಯಕ್ಷತೆಯನ್ನು ಹಿರಿಯ ಲೇಖಕಿ ಶ್ರೀಮತಿ ಜ್ಯೋತಿ ಬದಾಮಿಯವರು ವಹಿಸಲಿದ್ದಾರೆ. ಶ್ರೀಮತಿ ರಜನಿ ಜೀರಗ್ಯಾಳ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪದನಿಮಿತ್ತ ಸಹನಿರ್ದೇಶಕರಾದ ವಾಲ್ಟರ್ ಹೆಚ್ ಡಿಮೆಲ್ಲೊ ಉಪಸ್ಥಿತರಿರುತ್ತಾರೆ. ಅಧ್ಯಕ್ಷತೆಯನ್ನು ಭಾವಸಂಗಮದ ಸಂಸ್ಥಾಪಕ ಸಂಚಾಲಕರಾದ ರಾಜೇಂದ್ರ ಪಾಟೀಲ ವಹಿಸಲಿದ್ದಾರೆ.
ಒಂದು ದಿನದ ಈ ಕಾರ್ಯಕ್ರಮದಲ್ಲಿ ಉಮಾಶಂಕರ ಪುಸ್ತಕ ಪ್ರಶಸ್ತಿ, ಪ್ರತಿಭಾ ಪುರಸ್ಕಾರ, ಪುಸ್ತಕ ಬಿಡಗಡೆ, ಕವಿಗೋಷ್ಠಿ, ಸಾಧಕರಿಗೆ ಮತ್ತು ಸಹಕಾರಿಗಳಿಗೆ ಸನ್ಮಾನ ಅಲ್ಲದೇ ಸಾಂಸ್ಕøತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರುಗಲಿವೆ.