Belagavi News In Kannada | News Belgaum

ಸಿಎಂ ಘೋಷಣೆ ಖುಷಿಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ 75ರ ಅಜ್ಜ

ಬೀದರ್: ಸಿದ್ದರಾಮಯ್ಯ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕೈಯಲ್ಲಿ ಕೋಲು ಹಿಡಿದು ಗಡಿ ಜಿಲ್ಲೆ ಬೀದರ್‌ನಲ್ಲಿ 75 ವರ್ಷದ ಅಜ್ಜ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ಜಟಾಪಟಿ ನಡೆಯುತ್ತಿತ್ತು. ಕೊನೆಗೂ ಸಿದ್ದರಾಮಯ್ಯ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದೆ. ಇದರಿಂದ ಫುಲ್ ಖುಷಿಯಾದ ಬೀದರ್ ತಾಲೂಕಿನ ಮಲ್ಕಾಪೂರ್ ಗ್ರಾಮದ ಅಜ್ಜ ಡ್ಯಾನ್ಸ್ ಮಾಡಿ ಸಿದ್ದು ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.
ಸಿದ್ದರಾಮಯ್ಯ ಸಿಎಂ ಘೋಷಣೆ ಹಿನ್ನೆಲೆ ಕುರುಬ ಸಮಾಜದಿಂದ ಸಂಭ್ರಮಾಚರಣೆ ಮಾಡಲಾಗುತ್ತಿತ್ತು. ಈ ವೇಳೆ ಏಕಾಏಕಿ ಬಂದ ಅಜ್ಜ ಸಖತ್ ಸ್ಟೆಪ್ ಹಾಕಿದ್ದಾರೆ. ಬೀದರ್ ನಗರದ ಅಂಬೇಡ್ಕರ್ ವೃತದಲ್ಲಿ 75 ವರ್ಷದ ಅಜ್ಜ ಭರ್ಜರಿ ಡ್ಯಾನ್ಸ್ ಮಾಡುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.