Belagavi News In Kannada | News Belgaum

ಸಿದ್ದು ಸಿಎಂ ಆಗೋ ಖುಷಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ

ಧಾರವಾಡ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಅಭೀಮಾನಿಗಳು ರಾಜ್ಯಾದ್ಯಂತ ಸಿಹಿಯೂಟ ಆಯೋಜನೆ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಹೋಳಿಗೆ ಊಟ ನೀಡಲಾಗುತ್ತಿದೆ.
ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೆಳಗ್ಗಿನ ಉಪಾಹಾರದ ಜತೆಗೆ ಡಾ.ಮಯೂರ ಮೋರೆ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಹೋಳಿಗೆ ವಿತರಣೆ ನಡೆದಿದೆ. ಧಾರವಾಡ ಮಿನಿವಿಧಾನಸೌಧ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಹಾರದ ಜತಗೆ ಹೋಳಿಗೆ ನೀಡಲಾಗುತ್ತಿದೆ. ಧಾರವಾಡ-ಹುಬ್ಬಳ್ಳಿ ದಕ್ಷಿಣ ಕನ್ನಡ, ಬಾಗಲಕೋಟೆ ಸೇರಿ ಮೂರು ಜಿಲ್ಲೆಗಳಲ್ಲಿ 17 ಕ್ಯಾಂಟೀನ್ ಗಳಲ್ಲಿ ಹೊಳಿಗೆ ವಿತರಣೆ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಇದಕ್ಕಾಗಿ 9 ಸಾವಿರ ಹೋಳಿಗೆ ಸಿದ್ಧಪಡಿಸಲಾಗಿದೆ.//////