Belagavi News In Kannada | News Belgaum

ಖಾನಾಪುರ: ರೈತ ಮಹಿಳೆಯ ಮೇಲೆ ಕರಡಿಗಳ ದಾಳಿ

ಬೆಳಗಾವಿ:  ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯ ಮೇಲೆ ಎರಡು ಕರಡಿಗಳು ದಾಳಿ ಮಾಡಿದ ಪರಿಣಾಮವಾಗಿ ಮಹಿಳೆಯು ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ಬಾನಟ್ಟಿ ಸನಿಹದ ಹೊಲವೊಂದರಲ್ಲಿ ನಡೆದಿದೆ.

ರೇಣುಕಾ ಈರಪ್ಪ ನಾಯಿಕ (60)  ಗಾಯಗೊಂಡ ಮಹಿಳೆ. ಇವರು ತಮ್ಮ ಹೊಲದಲ್ಲಿ ಕೆಲಸ ಮಾಡುವ ವೇಳೆ ಎರಡು ಕರಡಿಗಳು ಏಕಾಏಕಿ ದಾಳಿ ಮಾಡಿವೆ. ಈ ದಾಳಿಯಿಂದ ಮಹಿಳೆಯ ತೆಲೆಗೆ ಬಲವಾದ ಗಾಯವಾಗಿದ್ದು, ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ./////