Belagavi News In Kannada | News Belgaum

ವಿಧಾನಸೌಧದ 3ನೇ ಮಹಡಿಯಲ್ಲಿ ನೂತನ ಸಿಎಂ ನಾಮಫಲಕ ಅಳವಡಿಕೆ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯನವರು ಪ್ರತಿಜ್ಞಾವಿಧಿ ಓದುತ್ತಿದ್ದಂತೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ನೂತನ ಸಿಎಂ ನಾಮಫಲಕ ಅಳವಡಿಸಲಾಗಿದೆ.
ವಿಧಾನಸೌಧದ ಮೂರನೇ ಮಹಡಿಯ ಸಿಎಂ ಕೊಠಡಿಯಲ್ಲಿ ಇಷ್ಟು ದಿನ ಬಸವರಾಜ ಬೊಮ್ಮಾಯಿ ಅವರ ನಾಮಫಲಕ ಹಾಕಲಾಗಿತ್ತು. ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬೊಮ್ಮಾಯಿ ಅವರ ಹೆಸರು ತೆಗೆದು ಸಿಎಂ ಸಿದ್ದರಾಮಯ್ಯನವರ ನಾಮಫಲಕ ಅಳವಡಿಸಲಾಗಿದೆ.
ಸಿಎಂ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಕಚೇರಿಯಲ್ಲಿ ಸಿದ್ದರಾಮಯ್ಯನವರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಎಂ ಕೊಠಡಿಯ ಸಿಬ್ಬಂದಿ ಸಿದ್ದರಾಮಯ್ಯನವರು ಬಂದ ಕೂಡಲೇ ಗಣಪತಿ, ಸರಸ್ವತಿ, ಲಕ್ಷ್ಮೀ ಫೂಜೆ ನೆರವೇರಿಸಲು ರೆಡಿಯಾಗಿದ್ದಾರೆ./////