ವಿದ್ಯುತ್ ತಗುಲಿ ರೈತ ಸಾವು

ಬೆಳಗಾವಿ: ವಿದ್ಯುತ್ ತಂತಿ ತಗುಲಿ ರೈತರೊಬ್ಬರು ಮೃತಪಟ್ಟ ಘಟನೆ ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ಬಾಳಕೃಷ್ಣ ಧೋಂಡಿರಾಮ ಪೊವಾರ (47) ನಿವಾಸಿ ಶ್ರೀಪೇವಾಡಿ.ಮೃತ ರೈತ ಎಂದು ತಿಳಿದು ಬಂದಿದೆ. ಬಾಳಕೃಷ್ಣ ಪೊವಾರ ಅವರು ಜತ್ರಾಟ ಗ್ರಾಮದ ವ್ಯಾಪ್ತಿಯಲ್ಲಿ ಜಮೀನು ಮತ್ತು ದನದ ಕೊಟ್ಟಿಗೆ ಇತ್ತು. ಎಂದಿನಂತೆ ಜಾನುವಾರುಗಳಿಗೆ ಬಾವಿಯಿಂದ ನೀರು ತರಲು ಹೋಗುತ್ತಿದ್ದಾಗ ವಿದ್ಯುತ್ ಕಂಬದ ಬಳಿ ಹಾದು ಹೋಗಿದ್ದ ತಂತಿ ತಗುಲಿ ಮೃತಪಟ್ಟಿದ್ದಾರೆ. ಈ ಕುರಿತು ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರಿಯರು, ಸಹೋದರನನ್ನು ಇದ್ದಾರೆ.//////