ಭೀಕರ ರಸ್ತೆ ಅಪಘಾತ : ಮಗನ ಮಡಿಲಲ್ಲೇ ಪ್ರಾಣ ಬಿಟ್ಟ ತಂದೆ.! .

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ತಂದೆ- ಮಗ ಬೈಕ್‌ನಲ್ಲಿ ಹೋಗುವಾಗ ಅಪರಿಚಿತ ವಾಹನ ಬಂದು ಡಿಕ್ಕಿ ಹೊಡೆದ ಪರಿಣಾಮ ತಂದೆ ಸಾವಿಗೀಡಾದ ಘಟನೆ ನಡೆದಿದೆ..
ಬಾಗಲಕೋಟೆಯ ನವನಗರದ ವಾಜಪೇಯಿ ಕಾಲೋನಿ ನಿವಾಸಿಯಾಗಿದ್ದ ರೆಹಮಾನಸಾಬ್ ಮುದಗಲ್ (50) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ..
ರೆಹಮಾನ್ ಸಾಬ್ ಮಗ ಕಲಂದರ ಬಾಬಾನೊಂದಿಗೆ ಅಮೀನಗಡದಲ್ಲಿ ಟೈಲ್ಸ್ ಕೆಲಸಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆದರೆ, ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ..
ಬೈಕ್‌ನಿಂದ ಕೆಳಗೆ ಬಿದ್ದ ರೆಹಮಾನ್ ಸಾಬ್ ಮೇಲೆ ವಾಹನ ಹರಿದಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೆಳಗೆ ಬಿದ್ದು ಗಾಯಗೊಂಡ ಮಗ ತಂದೆಯನ್ನು ಆಸ್ಪತ್ರೆಗೆ ಸೇರಿಸಬೇಕು ಅನ್ನುವಷ್ಟರಲ್ಲೇ ಮಗನ ಮಡಿಲಲ್ಲೇ ತಂದೆ ಸಾವನ್ನಪ್ಪಿದ್ದಾರೆ..
ಸ್ಥಳಕ್ಕೆ ಬಂದ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗದೇ ಅಮೀನಗಡ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ತಂದೆಯ ಮೃತದೇಹವನ್ನು ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ..