ವಿದ್ಯುತ್ ತಂತಿ ತಗುಲಿ 13ರ ಬಾಲಕಿ ಸಾವು

ಬೆಳಗಾವಿ: ಮನೆ ಮುಂದಿನ ಹೈಟೆನ್ಷನ್ ತಂತಿ ತಗುಲಿ 13 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಮಚ್ಛೆ ಗ್ರಾಮದಲ್ಲಿ ನಡೆದಿದೆ.
ಮಧುರಾ ಮೋರೆ (13) ಮೃತಪಟ್ಟ ಬಾಲಕಿ. ತನ್ನ ಮನೆಯ ಒಂದನೇ ಮಹಡಿಯ ಮೇಲೆ ಆಟ ಆಡುತ್ತಿದ್ದ ಸಂದರ್ಭ ಹೈಟೆನ್ಷನ್ ವಯರ್ ತಾಗಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಹೈಟೆನ್ಷನ್ ತಂತಿ ಇದ್ದ ಹಿನ್ನೆಲೆ ಮನೆ ಕಟ್ಟದಂತೆ ಮೋರೆ ಕುಟುಂಬಕ್ಕೆ ಹೆಸ್ಕಾಂ ಮೊದಲೇ ನೋಟಿಸ್ ನೀಡಿತ್ತು. ಹೆಸ್ಕಾಂ ನೋಟಿಸ್ ನೀಡಿದ್ದರೂ ಸಹಿತ ಅದನ್ನು ನಿರ್ಲಕ್ಷ್ಯ ಮಾಡಿ ಮೋರೆ ಕುಟುಂಬ ಮನೆ ನಿರ್ಮಿಸಿದ್ದರು. ಘಟನೆಯ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬಳಿಕ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////