ದುಡಿಯುವ ಕೈಗೆ ಉದ್ಯೋಗ ನೀಡಿ : ಹರ್ಷಲ್ ಭೊಯರ್
ಮಾರ್ಕಂಡೇಯ ನದಿ (ಮಿಷನ್ 2.0) ಕಾಮಗಾರಿ ಉದ್ಘಾಟನಾ ಸಮಾರಂಭ

ಬೆಳಗಾವಿ : ತಾಲೂಕಿನಲ್ಲಿ ಮಳೆ ಬೇಗನೆ ಪ್ರಾರಂಭವಾಗುವ ಸಂಭವವಿದ್ದು, ಮಾರ್ಕಂಡೇಯ ನದಿಯ ಕಾಮಗಾರಿಯನ್ನು ಸಾಧ್ಯವಾದಷ್ಟು ಪೂರ್ಣಗೊಳಸಲು ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ಹೇಳಿದರು.
ತಾಲ್ಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾರ್ಕಂಡೇಯ ನದಿ (ಮಿಷನ್ 2.0) ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜಗರ್ಣಿ, ಬೆಳಗುಂದು, ತುರಮುರಿ, ಬೆಕ್ಕಿನಕೇರಿ, ಉಜಗಾಂವ, ಬೆನಕನಹಳ್ಳಿ, ಸುಳಗಾ(ಉ) ಹಿಂಡಲಗಾ ಹಂದಿಗನೂರ, ಅಂಬೇವಾಡಿ, ಅಗಸಗಾ, ಕೇದನೂರ, ಬಂಬರಗಾ, ಕಂಗ್ರಾಳಿ (ಕೆ.ಎಚ್.), ಕಂಗ್ರಾಳಿ (ಬಿ.ಕೆ), ಕಡೋಲಿ, ಕಾಕತಿ ಹಾಗೂ ಹೊನಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಲಿಕಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುವದರಿಂದ, ಎಲ್ಲ ನರೇಗಾ ಕೂಲಿಕಾರರಿಗೆ ಮಾರ್ಕಂಡೇಯ ನದಿಯ ಕಾಮಗಾರಿಯನ್ನು ನೀಡಿ ಎಂದು ತಿಳಿಸಿದರು.
ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಇತರ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ನೀಡಬೇಕು. ಕೂಲಿಕಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ದುಡಿಯವ ಬಡವರ್ಗದವರಿಗೆ ಉದ್ಯೋಗ ನೀಡಿ. ಯವುದೇ ಕಾರಣಕ್ಕೂ ಕೂಲಿಕಾರ್ಮಿಕರು ಉದ್ಯೋಗ ಖಾತರಿ ಯೋಜನೆಯಿಂದ ದೂರವಿರಬಾರದು ಎಂದು ತಿಳಿಸಿದರು. ಇದೆ ಸಂದರ್ಭದಲ್ಲಿ ನರೇಗಾ ಕಾಯಕ ಬಂದುಗಳಿಗೆ ಮತ್ತು ಕೂಲಿಕಾರ್ಮಿಕರಿಗೆ ಶರ್ಟ್ ಮತ್ತು ಕ್ಯಾಪ್ ಹಾಗೂ ಪ್ರಥಮ ಚಿಕಿತ್ಸೆ ಪಟ್ಟಿಗೆಯನ್ನು ವಿತರಿಸಿದರು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ್, ಸಹಾಯಕ ನಿರ್ದೇಶಕರಾದ ರಾಜೇಂದ್ರ ಮೊರಬದ, ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕ ಬಸವರಾಜ ಎನ್. ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ, ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ದಿ, ತಾಐಇಸಿ ಸಂಯೋಜಕ ರಮೇಶ ಮಾದರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿ.ಐ. ಬರಗಿ, ತಾಂತ್ರಿಕ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.//////