ಖಾತ್ರಿ ಕೆಲಸದ ಜೊತೆಗೆ ಕೂಲಿಕಾರರ ಆರೋಗ್ಯಕ್ಕೂ ಒತ್ತು: ಪಿಡಿಒ ಶಿಲ್ಪಾ ನಾಯಕ್ವಾಡಿ

ಕಾಗವಾಡ: ಮನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಜನತೆಗೆ ಕೂಲಿ ಒದಗಿಸುವುದರ ಜೊತೆಗೆ ಆರೋಗ್ಯದಡೆಗೂ ಒತ್ತು ನೀಡಲಾಗುತ್ತಿದೆ ಎಂದು ಪಿಡಿಒ ಶಿಲ್ಪಾ ನಾಯಕ್ವಾಡಿ ಹೇಳಿದರು.
ಕಾಗವಾಡ ತಾಲೂಕಿನ ಶಹಾಪೂರ ಗ್ರಾಮದಲ್ಲಿ ಶುಕ್ರವಾರ ಗ್ರಾಮ ಕೆಎಚ್ ಪಿಟಿ ಸಹಯೋಗದಲ್ಲಿ “ಗ್ರಾಮ ಆರೋಗ್ಯ ಅಭಿಯಾನ”ದಡಿ ಮನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಬಿಪಿ, ಶುಗರ್, ಮಧುಮೇಹ, ಅತಿ ರಕ್ತದೊತ್ತಡದಂತಹ ಪ್ರಾಥಮಿಕ ಅಸಾಂಕ್ರಮಿಕ ಗುಣಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಾಲೋಚನೆ ನೀಡಲಾಗುವುದು. ಜನರು ಸ್ವಯಂಪ್ರೇರಿತವಾಗಿ ಶಿಬಿರದಲ್ಲಿ ಭಾಗಿಯಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಗವಾಡ ತಾಲೂಕಿನ ಉಗಾರ ಬಿಕೆ ಮತ್ತು ಮಂಗಸೂಳಿ ಗ್ರಾಮದಲ್ಲಿಯೂ ಆರೀಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಇಲ್ಲಿಯೂ ನೂರಾರು ಜನ ಕೂಲಿಕಾರರು ಶಿಬಿರದ ಲಾಭ ಪಡೆದರು.
ಜುಗೂಳ ಗ್ರಾಮ ಪಂಚಾಯತ ಕಾರ್ಯದರ್ಶಿ ಯಶವಂತ ವಂಟಗೂಡೆ, ಶಿರಗುಪ್ಪಿ ಪಿಎಚ್ ಸಿ ವೈದ್ಯಕೀಯ ಸಿಬ್ಬಂದಿ, ಐಇಸಿ ಸಂಯೋಜಕ ಅಮೀತ ಇಂಗಳಗಾಂವಿ, ಆದಿನಾಥ ಚೌಗಲೇ, ಗ್ರಾಮ ಪಂಚಾಯತ ಸಿಬ್ಬಂದಿಗಳಾದ ಅಕ್ಷಯ ಐಹೊಳೆ, ಆಶಾ, ಅಂಗನವಾಡಿ ಕಾರ್ಯಕರ್ತರು ಭಾಗಿಯಾಗಿದ್ದರು.//////