Belagavi News In Kannada | News Belgaum

ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ

ಬೆಳಗಾವಿ : ಬೆಳಗಾವಿ ಪ್ರಾದೇಶಿಕ ಆಯುಕ್ತರ, ಆದೇಶದನ್ವಯ ಘಟಪ್ರಭಾ ಯೋಜನಾ ವಲಯದಡಿಯಲ್ಲಿ ಬರುವ ಹಿಡಕಲ್ ಜಲಾಶಯದಿಂದ, ಮೇ.26 2023ರ ಸಂಜೆ 6 ಗಂಟೆಯಿಂದ 5 ದಿನಗಳ ವರೆಗೆ ಘಟಪ್ರಭಾ ಬಲದಂಡೆ ಕಾಲುವೆಗೆ 2000 ಕ್ಯೂಸೆಕ್ಸ್, ಘಟಪ್ರಭಾ ಎಡದಂಡೆ ಕಾಲುವೆ 2400 ಕ್ಯೂಸೆಕ್ಸ್, ಸಿಬಿಸಿ ಉಪ ಕಾಲುವೆಗೆ 500 ಕ್ಯೂಸೆಕ್ಸ್‍ನಂತೆ, ಕುಡಿಯುವ ನೀರನ್ನು ಹರಿಸಲಾಗಿರುತ್ತದೆ.
ನಂತರದ ದಿನಗಳಲ್ಲಿ ಜೂನ್ ತಿಂಗಳ ಅಂತ್ಯದವರೆಗೆ ವಾಡಿಕೆಯಂತೆ ಮಳೆಯಾಗುವ ಅವಧಿಯವರೆಗೆ ಕುಡಿಯುವ ನೀರು ಕಾಲುವೆಗಳಿಗೆ ಹರಿಸಲು ಹಿಡಕಲ್ ಜಲಾಶಯದಲ್ಲಿ ನೀರು ಲಭ್ಯವಿರುವುದಿಲ್ಲ.
ಆದ್ದರಿಂದ ಕಾಲುವೆಗಳ ಮೂಲಕ ಹರಿಸಿರುವ ನೀರನ್ನು ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುವ ಉದ್ದೇಶಕ್ಕೆ ಬಳಸಿಕೊಳ್ಳಬೇಕಾಗಿರುತ್ತದೆ. ನೀರು ಅತ್ಯಮೂಲ್ಯ ನೈಸರ್ಗಿಕ ಸಂಪತ್ತಾಗಿದ್ದು, ಇದನ್ನು ಮುಂದಿನ ದಿನಗಳಲ್ಲಿ ಜಾಗರೂಕತೆಯಿಂದ ಸಂಗ್ರಹಿಸಿ ಇಟ್ಟುಕೊಳ್ಳುವುದು ಹಾಗೂ ಮಿತವಾಗಿ ಬಳಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತಿದೆ.
ನೀರು ಸದ್ಬಳಕೆಯಾಗುವಂತೆ ಇಲಾಖೆಗಳ ಸಿಬ್ಬಂದಿಯವರು ನಿಗಾವಹಿಸಲು ಕನೀನಿನಿ ಘಬದಕಾನಿ ವೃತ್ತ, ಹಿಡಕಲ್ ಡ್ಯಾಮ್ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. //////