ಯುವತಿ ನಾಪತ್ತೆ

ಬೆಳಗಾವಿ: ಗೋಕಾಕ ತಾಲೂಕಿನ ಮುನ್ಯಾಳ ಹಾಲಿವಸ್ತಿ (ರಡ್ಡರಟ್ಟಿ) ಗ್ರಾಮದ ನಿವಾಸಿಯಾದ ನೀಲವ್ವಾ ಮಲ್ಲಪ್ಪ ಪಾನಶೆಟ್ಟಿ (18) ಇವಳು ಮೇ.21 2023 ರಂದು ರಾತ್ರಿ 10 ಗಂಟೆಯಿಂದ ಮೇ.22 ರ ಬೆಳಿಗ್ಗೆ 5.30 ರ ನಡುವಿನ ಅವಧಿಯಲ್ಲಿ ಮನೆಯಿಂದ ಹೋದವಳು ಮರಳಿ ಬಂದಿರುದಿಲ್ಲ ಎಂದು ಇವಳ ತಂದೆಯಾದ ಮಲ್ಲಪ್ಪ ಬಸಪ್ಪ ಪಾನಶೆಟ್ಟಿ ಅವರು ದೂರು ದಾಖಲಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆ ಪಟ್ಟಿ:
ಎತ್ತರ 4.8 ಫೂಟ್, ಸದೃಢ ಮೈಕಟ್ಟು, ಕಪ್ಪು ಕೂದಲು, ಗೋಧಿ ಕೆಂಪು ಮೈಬಣ್ಣವಿದ್ದು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಹಸಿರು ಟೀ ಶರ್ಟ್ ಧರಿಸಿರುತ್ತಾಳೆ ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ.
ಸದರಿ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ದೂರವಾಣಿ ಸಂಖ್ಯೆ 08334-222233, ಅಥವಾ ಇಮೇಲ್ ವಿಳಾಸ ಏuಟgoಜbgm@ಞsಠಿ.gov.iಟಿ ಗೆ ಸಂಪರ್ಕಿಸಬಹುದು ಎಂದು ಕುಲಗೋಡ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////