ಕಬ್ಬಿಣದ ಸಲಾಕೆಯಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಹಿಂಡಲಗಾ: ಕಬ್ಬಿಣದ ಸಲಾಕೆಯಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ.ಹೌದು ಬೆಳಗಾವಿ ನಗರದ ಹಿಂಡಲಗಾ ಗ್ರಾಮದ ರಾತ್ರಿ ಸಮಯದ ಮದುವೆಯೊಂದರಲ್ಲಿ ಮದುವೆಗೆ ಬಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಬಾಬಾಸಾಹೇಬ ಸುತಳೆ ಎಂಬ ವ್ಯಕ್ತಿ ಮದುವೆ ಆಹ್ವಾನಕ್ಕೆ ಹೊಗಿದ್ದನು ಮದುವೆ ಕಾರ್ಯಕ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಬಾಬಾಸೆಹೇಬ ಎಂಬ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್ ಹಾಗೂ ಸಣಿಕೆ ಗುದ್ದಲಿಯಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಹೆಡ್ ಇಂಜ್ಯೂರಿ ಮಾಡಿದ್ದಾರೆ.ರಾತ್ರಿ ಸಮಯದಲ್ಲಿ ಸಾರ್ವಜನಿಕರ ಮುಂದೆ ಬಾಬಾಸಾಹೇಬನ ಮೇಲೆ ಹಲ್ಲೆಯಾಗಿದೆ.ತದನಂತರ ಅಂಬ್ಯೂಲೆನ್ಸ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ ೫ ಸ್ಟಿಚ್ ಬೀಳುವ ಹಾಗೇ ಹಲ್ಲೆ ಮಾಡಿ ಹತ್ಯೆಗೆ ಸಂಚು ಮಾಡಿದ್ದರೆಂದು ಬಾಬಾಸಾಹೇಬ ಆರೋಪ ಮಾಡಿದ್ದಾರೆ.ನಂತರ ಎಮ್ ಎಲ್ ಸಿ ಆಗುತ್ತಿದ್ದಂತೆ ಪೋಲಿಸರು ಪರೀಶಿಲನೆ ಮಾಡಿ ಪ್ರಕರಣ ದಾಖಲಿಸೊಕೊಳ್ಳುತ್ತೆವೆಂದು ಹೇಳಿ ಹೋದವರು ಮರಳಿ ಕ್ಯಾರೆ ಎಂದಿಲ್ಲ.ಮರುದಿನ ಪೊಲಿಸರಿಗೆ ಭೆಟಿಯಾಗಿ ದೂರು ನೀಡಲು ಹೋದಾಗ ಮಾಡೊನ ನೊಡೊನ ಎಂದು ಹೇಳಿ ಸಮಜಾಯಿಸಿ ಕಳಿಸಿದ್ದಾರೆ.ಹಾಪ್ ಮರ್ಡರ್ ಕೇಸ್ ನ್ನು ದಾಖಲಿಸಿಕೊಳ್ಳದೆ ಇರುವದೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಂತರ ಪೋಲಿಸ್ ಆಯುಕ್ತರಿಗೆ ಭೆಟಿಯಾದಾಗ ಗ್ರಾಮೀಣ ಪೋಲಿಸರು ಮತ್ತೆ ಯಡವಟ್ಟು ಮಾಡಿದ್ದಾರೆ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿತ್ತು.ಆದರೆ ತಲೆ ಒಡೆದುಕೊಂಡು ರಕ್ತ ಸುರಿಸಿದವರ ಪರ ನ್ಯಾಯ ಇಲ್ಲದಂತಾಗಿದೆ ಅದನ್ನಲ್ಲಾ ಕೊರ್ಟ ತೀರ್ಪು ಕೊಡಿತ್ತೆ ಸಾಕ್ಷಿ ವಿಟನೆಸ್ ಕೊರ್ಟ ನೊಡುತ್ತೆ ಆದರೆ ಮೊದಲು ದೂರು ದಾಖಲಿಸಿಕೊಳ್ಳಬೆಕಾದ ಗ್ರಾಮೀಣ ಠಾಣೆ ಪೋಲಿಸರು ವಿಳಂಬ ಮಾಡಿದ್ದಾದ್ರೂ ಎಕೆ ಎಂಬ ಪ್ರಶ್ನೆ ಹಲವು ದಾರಿಗಳನ್ನ ತೊರಿಸುತ್ತಿವೆ.ಪ್ರಮುಖ ಆರೋಪಿ ಪ್ರಶಾಂತ ಕೊಲಕಾರ್ ದ್ವಿತಿಯ ಆರೊಪಿ ಅಮೀತ ಕೊಲಕಾರ್ ಎಂದು ಬಾಬಾಸಾಹೇಬ ಸುತಳೆ ಪೊಲಿಸರಿಗೆ ದೂರು ನೀಡಿದ್ದಾರೆ.ಇನ್ನೂ ಪೋಲಿಸ್ ಆಯುಕ್ತರು ಪೋಲಿಸರ ವಿರುದ್ದ ಹಾಗೂ ತಪ್ಪಿತಸ್ತರ ವಿರುದ್ದ ಹೆಗೆ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೊಡಬೇಕಿದೆ.ಹಿಂಡಲಗಾ ನಲ್ಲಿ ಹೆಚ್ಚುತ್ತಿರುವ ಪುಡಿರೌಡಿಗಳ ಅಟ್ಟಹಾಸ ಕಣ್ಣು ಮುಚ್ಚಿ ಕುಳಿತ ಗ್ರಾಮೀಣ ಪೋಲಿಸರು.