Belagavi News In Kannada | News Belgaum

ಕರ್ತವ್ಯ ಲೋಪ ಎಸಗಿದ ಪಿಎಸ್‌ಐ ಅಮಾನತು

ಬೀದರ್: ಅನಧಿಕೃತ ಕೆಮಿಕಲ್ ಸಂಗ್ರಹ ಮತ್ತು ಅಕ್ರಮ ಗುಟ್ಕಾ ತಯಾರಿಕೆ ಪ್ರಕರಣಗಳಲ್ಲಿ ಮಾಹಿತಿ ಕಲೆ ಹಾಕಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿ ಕರ್ತವ್ಯ ಲೋಪ ಮಾಡಿದ ಹಿನ್ನೆಲೆ ಬೀದರ್ ಜಿಲ್ಲೆಯ ಪಿಎಸ್‌ಐ (PSI) ಅವರನ್ನು ಅಮಾನತು ಮಾಡಲಾಗಿದೆ.

ಹುಮ್ನಾಬಾದ್ ಪಿಎಸ್‌ಐ ಮಂಜುನಾಥ ಗೌಡರನ್ನು ಅಮಾನತು ಮಾಡಲಾಗಿದ್ದು, ಹುಮ್ನಾಬಾದ್ ಸಿಪಿಐಗೆ ಎಸ್ಪಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಸರಿಯಾದ ಮಾಹಿತಿ ಕಲೆ ಹಾಕಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ಕಾರಣ ಪಿಎಸ್‌ಐ ಅಮಾನತು ಮಾಡಿ ಬೀದರ್ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಆದೇಶ ಹೊರಡಿಸಿದ್ದಾರೆ.

ಹುಮ್ನಾಬಾದ್ ಎಎಸ್ಪಿ ವರದಿ ಆಧಾರದ ಮೇಲೆ ಅಮಾನತು ಆದೇಶ ಮಾಡಿದ್ದು, ವಿವಿಧ ನಕಲಿ ಬ್ರ್ಯಾಂಡ್‌ನ ಪಾನ್ ಮಸಾಲ ತಯಾರಿಕಾ ಘಟಕ ಹಾಗೂ ಅಕ್ರಮ ಕೆಮಿಕಲ್ ಸಂಗ್ರಹ ಪ್ರಕರಣದಲ್ಲಿ ಅಕ್ರಮಕ್ಕೆ ಬ್ರೇಕ್ ಹಾಕುವಲ್ಪಿ ಪಿಎಸ್‌ಐ ವಿಫಲರಾಗಿದ್ದಾರೆ. ಈ ಎರಡೂ ಪ್ರಕರಣಗಳನ್ನು ಚಿಟಗುಪ್ಪ ಪಿಎಸ್‌ಐ ನೇತೃತ್ವದ ತಂಡ ದಾಳಿ ಮಾಡಿ ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಹುಮ್ನಾಬಾದ್ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ.//////