45 ವರ್ಷದ ಶಿಕ್ಷಕಿ ಕೊಟ್ಟ ಮಿಸ್ ಕಾಲ್ : ಸಾವಿನೊಂದಿಗೆ ಅಂತ್ಯ

ಹೈದರಾಬಾದ್: 45 ವರ್ಷದ ಶಿಕ್ಷಕಿ ಮತ್ತು 25 ವರ್ಷದ ಯುವಕನ ನಡುವೆ ಒಂದು ಮಿಸ್ಕಾಲ್ನಿಂದ ಶುರುವಾದ ಪರಿಚಯ ವಿವಾಹೇತರ ಸಂಬಂಧಕ್ಕೆ ತಿರುಗಿ, ಕೊನೆಗೆ ಇಬ್ಬರ ಸಾವಿನಿಂದ ಸಂಬಂಧ ಅಂತ್ಯವಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಶಿಕ್ಷಕಿ ಮತ್ತು ಯುವಕ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಯುವಕನ ಹೆಸರು ರಾಜೇಶ್. ಈತ ಮುಳುಗು ಜಿಲ್ಲೆಯ ಪಂಚೋತಕುಲಪಲ್ಲಿಯ ನಿವಾಸಿ. ಶಿಕ್ಷಕಿಯ ಹೆಸರು ಸುಜಾತ. ಈಕೆ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದು, ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ಹಯಾತ್ ನಗರದಲ್ಲಿ ವಾಸವಿದ್ದರು. ಇಬ್ಬರು ಮೇ 29ರಂದು ಹಯಾತ್ನಗರ ಸಮೀಪದ ಕುಂಟ್ಲೂರು ಬಳಿಕ ಶವವಾಗಿ ಪತ್ತೆಯಾಗಿದ್ದರು.
ಸುಮಾರು ಒಂದೂವರೆ ವರ್ಷಗಳ ಹಿಂದೆ ರಾಜೇಶ್ ಫೋನ್ಗೆ ಒಂದು ಮಿಸ್ ಕಾಲ್ ಬಂತು. ಆ ಕಾಲ್ ಮಾಡಿದ್ದು ಶಿಕ್ಷಕಿ ಸುಜಾತ. ಮಿಸ್ ಕಾಲ್ ನೋಡಿ ವಾಪಸ್ ಕರೆ ಮಾಡಿದಾಗ ರಾಜೇಶ್ ಮತ್ತು ಸುಜಾತ ನಡುವೆ ಪರಿಚಯವಾಗಿದೆ. ಈ ವೇಳೆ ಸುಜತಾ ತನಗೆ ಮದುವೆ ಆಗಿಲ್ಲ ಎಂದು ಹೇಳಿಕೊಂಡಿದ್ದರು. ಯುವಕನು ಕೂಡ ಮದುವೆ ಆಗಿರಲಿಲ್ಲ. ಇಬ್ಬರು ಚಾಟಿಂಗ್ ಮಾಡಲು ಆರಂಭಿಸಿದರು.
ಪರಸ್ಪರ ಚಾಟಿಂಗ್ ಮಾಡುತ್ತಾ ಇಬ್ಬರ ನಡುವಿನ ಸ್ನೇಹ ಗಟ್ಟಿಯಾಗಿ ಅದು ಪ್ರೇಮಕ್ಕೆ ತಿರುಗಿದೆ. ಸಮಯ ಸಿಕ್ಕಾಗ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಇದಾದ ಬಳಿಕ ಮದುವೆಯಾವುದಾಗಿ ರಾಜೇಶ ಕೇಳಿಕೊಂಡಾಗ ನನ್ನಗೆ ಮದುವೆಯಾಗಿ ಎರಡು ಮಕ್ಕಳಿದಾರೆ, ನಮ್ಮಿಬ್ಬರ ಪ್ರೇಮ ಹೀಗೆ ಸಾಗಲಿ ಎಂದು ಹೇಳಿದ ಶಿಕ್ಷಕಿಯ ಮಾತಿಗೆ, ರಾಜೇಶ ನಿರಾಕರಿಸಿ ದೂರ ವಾಗಿದ್ದಾರೆ. ಇದರಿಂದ ನೊಂದು ಶಿಕ್ಷಕಿ ವಿಷಸೇವಿಸಿ ಸಾವಿನ ದಾರಿ ಹಿಡಿದಿದ್ದಾಳೆ. ಈ ವಿಚಾರ ತಿಳಿಯುತ್ತಿದಂತೆ ರಾಜೇಶ ಮೃತಪಟ್ಟಿದ್ದಾರೆ ಎನ್ನಲಾಗಿದೆ./////