Belagavi News In Kannada | News Belgaum

5‌ ಲಕ್ಷ ರೂ. ವಂಚನೆ ಪ್ರಕರಣ: ಓರ್ವ ಪೊಲೀಸ್ ಸೇರಿ ಮೂವರ ಬಂಧನ

ಬೆಳಗಾವಿ: 2000 ಮುಖಬೆಲೆಯ ನೋಟು ಬದಲಾಯಿಸಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ 5 ಲಕ್ಷ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಗವಾಡ ಠಾಣೆ ಪೊಲೀಸರು  ಓರ್ವ ಪೊಲೀಸ್‌ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಪೊಲೀಸ್ ಕಾನ್ಹೇಬಲ್ ಸಾಗರ್ ಜಾಧವ್, ಅರಿಫ್,  ಲಕ್ಷ್ಮಣ್ ನಾಯಕ್ ಬಂಧಿತ ಆರೋಪಿಗಳು. ಈಗಾಗಲೇ ಇವರನ್ನು ಜಿಲ್ಲಾ ಪೊಲೀಸರು ನ್ಯಾಯಾಲಯ ಒಪ್ಪಿಸಿದ್ದಾರೆ. 500 ಮುಖಬೆಲೆಯ 5 ಲಕ್ಷ ರೂ. ನೀಡಿದ್ದಾರೆ ಮತ್ತು 2000 ಮುಖಬೆಲೆಯ 6 ಲಕ್ಷ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಲಕ್ಷಾಂತರ ಕೋಟ ನೋಟು ವಶಕ್ಕೆ ಪಡೆದುಕೊಂಡಿದ್ದಾರೆ./////