ಪತಿಗೆ ಕೆಲಸಕ್ಕೆ ಹೋಗುವಂತೆ ಹೇಳಿದಕ್ಕೆ ಪತ್ನಿ ಹತ್ಯೆ

ಮೂಡಲಗಿ: ಮನೆಯಲ್ಲೇ ಕಾಲ ಕಳೆಯುತ್ತಿದ್ದ ಪತಿಗೆ ಕೆಲಸಕ್ಕೆ ಹೋಗುವಂತೆ ಹೇಳಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪ್ರಕರಣ ತಾಲೂಕಿನ ನಾಗನೂರ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಬಸವ್ವ ಹಿಡಕಲ್ (35) ಕೊಲೆಯಾದ ಮಹಿಳೆ . ಹಣಮಂತ ಹಿಡಕಲ್ ಕೊಲೆಗೈದ ಆರೋಪಿ . ಕಳೆದ ಕೆಲ ದಿನಗಳಿಂದ ಆರೋಪಿ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುತ್ತಿದ್ದ. ಇದರಿಂದ ಬೆಸತ್ತ ಪತ್ನಿ ಕೆಲಸಕ್ಕೆ ಹೋಗುವಂತೆ ಹೇಳಿದ್ದಾೂಊಳೆ. ಶುಕ್ರವಾರ ತಡರಾತ್ರಿ ಇಬ್ಬರಿಗೂ ಜಗಳ ಶುರುವಾಗಿದ್ದು.ಈ ವೇಳೆಯಲ್ಲಿ ಸಿಟ್ಟಿಗೆದ್ದ ಆರೋಪಿ ಪತ್ನಿಯ ಕತ್ತುಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ತಾನೇ ಪೋಲಿಸ್ ಠಾಣೆಗೆ ತೇರಳಿ ಶರಣಾಗಿದ್ದಾನೆ.
ಈ ಸಂಬಂಧ ಮೂಡಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಘಟನಾ ಸ್ಥಳಕ್ಕೆ ಪೋಲಿಸ್ ಹಿರಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದ್ದಾರೆ./////