ಬೈಲಹೊಂಗದಲ್ಲಿ ಆಸ್ತಿ ವಿವಾದಕ್ಕೆ ಮಾಜಿ ಸೈನಿಕನ ಬರ್ಬರ ಹತ್ಯೆ

ಬೆಳಗಾವಿ: ಆಸ್ತಿ ವಿಚಾರವಾಗಿ ಸಹೋದರರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ತಿಗಡಿ ಗ್ರಾಮದ ನಿವಾಸಿ ಸುರೇಶ್ ಖಣಗಾಂವಿ ಹತ್ಯೆಯಾದ ವ್ಯಕ್ತಿ. ಶಂಕರ್ ಖಣಗಾಂವಿ ಕೊಲೆ ಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ. ಹತ್ಯೆಗೀಡಾದ ಸುರೇಶ್ ಮಾಜಿ ಸೈನಿಕನಾಗಿದ್ದು, ಸದ್ಯ ಕೃಷಿ ಮಾಡಿಕೊಂಡು ಜಮೀನಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಆಸ್ತಿ ವಿಚಾರವಾಗಿ ಆರೋಪಿ ಶಂಕರ್ ಖಣಗಾಂವಿ ಹಾಗೂ ಹತ್ಯೆಗೀಡಾದ ಸುರೇಶ್ ನಡುವೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿದ್ದರಿಂದ ಸುರೇಶ್ ನ ಚಿಕ್ಕಪ್ಪ ಶಂಕರ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರಿಂದ ಬಲವಾಗಿ ಪೆಟ್ಟುಬಿದ್ದಿದ್ದರಿಂದ ಸುರೇಶ್ ಖಣಗಾಂವಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ಸ್ಥಳದಲ್ಲೇ ಇದ್ದ ಸದಾ ಖಣಗಾಂವಿಗೆ ಗಂಭೀರವಾಗಿ ಗಾಯವಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.//////