Belagavi News In Kannada | News Belgaum

ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಸಾಮಾಜಿಕ ಪರಿಶೋಧನೆಗೆ ನೆರವಾಗಬೇಕು: ಅಪರ ಮುಖ್ಯ ಕಾರ್ಯದರ್ಶಿಗಳು ಎಲ್.ಕೆ.ಅತೀಕ್

ಬೆಳಗಾವಿ : ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಸಾಮಾಜಿಕ ಪರಿಶೋಧನೆಗೆ ನೆರವಾಗಬೇಕು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್ ರವರು ಸೂಚಿಸಿದ್ದಾರೆ.

ನಗರದ ಭಾಗ್ಯ ನಗರದಲ್ಲಿರುವ ಆಲ್ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಪ್ ಗೌರ್ನೆನ್ಸ್ ಬೇತಿಕೇಂದ್ರದಲ್ಲಿಂದು, ಓIಖಆ Pಖ ಹೈದರಾಬಾದ್, ಂಓS SIಖಆ Pಖ ಮೈಸೂರು ಹಾಗೂ ರಾಜ್ಯ ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ದಸಹಯೋಗದಲ್ಲಿ ಆರಂಭವಾದ 30 ದಿನಗಳ ಸಾಮಾಜಿಕ ಪರಿಶೋಧನೆ ಪ್ರಮಾಣೀಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧ್ವನಿ ಮುದ್ರಿತ ಸಂದೇಶದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳು ಮಾತನಾಡಿದರು.
ಪಂಚಾಯತ ರಾಜ್ ಅಪರ ಮುಖ್ಯಕಾರ್ಯದರ್ಶಿ ಉಮಾಮಹಾದೇವ ಅವರು, ಜನರ ಅಧಿಕಾರದ ದೃಷ್ಠಿಕೋನದಿಂದ ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಜನರ ಹಕ್ಕು ಮತ್ತು ಅಧಿಕಾರಗಳನ್ನು ಖಾತರಿಪಡಿಸಲು ಸಾಮಾಜಿಕ ಪರಿಶೋಧನೆ ನೆರವಾಗಬೇಕು.

ವಿಶೇಷವಾಗಿ ದುರ್ಬಲ ವರ್ಗದವರಿಗೆ ಸಿಗಬೇಕಾದ ಅವಕಾಶಗಳನ್ನು ಖಚಿತಪಡಿಸಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಪರಿಶೋಧಕರು ಹೆಚ್ಚು ಅಧ್ಯಯನಾರ್ಥಿಗಳಾಗಿ ಗುಣಾತ್ಮಕ ಕಾರ್ಯದಲ್ಲಿತೊಡಗಿಕೊಳ್ಳಬೇಕು ಎಂದು ತಿಳಿಸಿದರಲ್ಲದೇ, ಸಾಮಾಜಿಕ ಪರಿಶೋಧನೆ ಇತರೆ ಆಡಿಟ್ಪ್ರಕ್ರಿಯೆಗಳಿಗಿಂತ ಭಿನ್ನವಾಗಿದ್ದು, ಜನರ ಒಳಗೊಳ್ಳುವಿಕೆಯ ಮೂಲಕ ಅನುಷ್ಟಾನ ಸಂಸ್ಥೆಗಳ ಕಾರ್ಯಕ್ಷಮತೆ ವೃದ್ಧಿಸಲು, ವ್ಯವಹರಣೆಗಳನ್ನು ಪಾರದರ್ಶಕವಾಗಿಡಲು, ನೈತಿಕಮೌಲ್ಯಗಳನ್ನು ಬಲಪಡಿಸಲು ಸಾಧ್ಯವಾಗಬೇಕು ಎಂದು ನುಡಿದರು.

ಆನ್ ಲೈನ್ ಮೂಲಕ ಮಾತನಾಡಿದ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ನಳಿನ್ ಅತುಲ್ ಅವರು, ರಾಜ್ಯದಲ್ಲಿ ನಡೆದಿರುವ ಸಾಮಾಜಿಕ ಪರಿಶೋಧನಾ ಪ್ರಕ್ರಿಯೆಗಳು ಧನಾತ್ಮಕ ನಿಟ್ಟಿನಲ್ಲಿ ದೇಶದಾದ್ಯಂತ ಗಮನಸೆಳೆದಿದೆ. ಸಾಮಾಜಿಕ ಪರಿಶೋಧಕರು ಕಾರ್ಯಕ್ಷೇತ್ರದ ಮಾಹಿತಿಗಳನ್ನು ಗ್ರಹಿಸಿ, ಗ್ರಾಮೀಣರಿಗೆ ಯೋಜನೆಯ ಮಾಹಿತಿಗಳನ್ನು ಒದಗಿಸಿ, ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತಾಗಬೇಕು ಎಂದು ನುಡಿದರು.

ಂಓS SIಖಆ Pಖ ಮೈಸೂರಿನ ನಿರ್ದೇಶಕರಾದ ಲಕ್ಷ್ಮೀಪ್ರಿಯಾ ರವರು ಮಾತನಾಡಿ, ಯೋಜನೆಯ ಮೂಲ ಆಶಯಗಳನ್ನು ಬಲಪಡಿಸಲು ಸಾಮಾಜಿಕ ಪರಿಶೋಧಕರು ತರಬೇತಿಯ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ತರಬೇತಿ ಕೇಂದ್ರದಲ್ಲಿ ಖುದ್ದು ಉಪಸ್ಥಿತರಿದ್ದ ಂಓS SIಖಆ Pಖ ಮೈಸೂರಿನ ಕೇಂದ್ರಕಛೇರಿಯ ಬೋಧಕರು ಹಾಗೂ ತರಬೇತಿ ಸಂಯೋಜಕರಾದ ಸಿ.ವಿಜಯಕುಮಾರ ತರಬೇತಿಯ ಮಾರ್ಗ ಸೂಚಿಗಳನ್ನು ವಿವರಿಸಿದರು. 30 ದಿನಗಳ ಪ್ರಮಾಣೀಕರಣ ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳ ಕಲಿಕೆಯ ಪ್ರವೃತ್ತಿಯನ್ನು ಬಾಹ್ಯಮೌಲ್ಯ ಮಾಪಕರು ಪರೀಕ್ಷೆ ನಡೆಸುವರು. ಪ್ರಮಾಣೀಕರಣ ತರಬೇತಿಯಲ್ಲಿ ಉತ್ತೀರ್ಣರಾದವರು ಸಾಮಾಜಿಕ ಪರಿಶೋಧಕರಾಗಿ ಮುಂದು ವರೆಯಲು ಅವಕಾಶ ವಿದೆ ಎಂದು ಹೇಳಿದರು.
30 ದಿನಗಳ ತರಬೇತಿಯ ಐeಚಿಜ ಅouಡಿse ಅooಡಿಜiಟಿಚಿಣoಡಿ ಆಗಿರುವ ರಾಜ್ಯ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ಅಧಿಕಾರಿ ಕೇಶವಮೂರ್ತಿ ಯವರು ತರಬೇತಿ ಅವಧಿಯ ಅಧಿವೇಶನದ ವಿಷಯಗಳನ್ನು ವಿವರಿಸಿದರು.

ಮೊದಲ ದಿನದ ಅಧಿವೇಶನದಲ್ಲಿ, ಸಾಮಾಜಿಕ ಪರಿಶೋಧನೆ ಕುರಿತು, ತೆಲಂಗಾಣ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ಸೌಮ್ಯ ಕೆಡಂಬಿ, ಭಾರತ ಸಂವಿಧಾನ ಅಧಿವೇಶನವನ್ನು ನಗರದ ವಂಟಮುರಿ ಪ್ರೌಢಶಾಲಾ ಶಿಕ್ಷಕರಾದ ಅಕ್ಕಮ್ಮ ವಿ. ಕುರಣೆಯವರು ನಡೆಸಿಕೊಟ್ಟರು.

ತರಬೇತಿಯ ಆರಂಭದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ, ಗಿಡಕೆ ್ಕನೀರೆರೆದು, ನಾಡಗೀತೆಯ ಮೂಲಕ ತರಬೇತಿ ಆರಂಭಿಸಲಾಯಿತು.

ವೇದಿಕೆಯಲ್ಲಿ ಬೆಳಗಾವಿ ಜಿಲ್ಲೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಮಾಯಪ್ಪ ಬಂಡ್ರೋಳ್ಳಿ, ಶ್ರೀಧರ ವಿನೋದ ದೇಸಾಯಿ, ಚಿತ್ರದುರ್ಗ ಡಿಪಿಎಂ ನಾಗರಾಜು, ಂIIಐSಉ ಸಹಾಯಕ ನಿರ್ದೇಶಕರಾದ ಅನಂದ ಹಂಪಣ್ಣವರ್, SIಖಆ Pಖ ವಿಕೇಂದ್ರೀಕೃತ ತರಬೇತಿ ಸಂಯೋಜಕರಾದ ಬಾಳಪ್ಪ ಭಜಂತ್ರಿ ಅವರು ಉಪಸ್ಥಿತರಿದ್ದರು.
ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಧಾರವಾಡ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಉತ್ತರಕನ್ನಡ, ಹಾಸನ, ಗದಗ ಮತ್ತು ಬಳ್ಳಾರಿ ಜಿಲ್ಲೆಗಳಿಂದ 38 ಪ್ರಶಿಕ್ಷಣಾರ್ಥಿಗಳ ಪ್ರಮಾಣೀಕರಣ ತರಬೇತಿಯಲ್ಲಿ ಪಾಲ್ಗೊಂಡಿದ್ದರು./////