Belagavi News In Kannada | News Belgaum

ಆಧಾರ್‌ ವಿವರ ಅಪ್ಡೇಟ್‌ ಮಾಡಿಸಲು ಇನ್ನು 8 ದಿನವಷ್ಟೇ ಬಾಕಿ

ನವದೆಹಲಿ: ಆಧಾರ್‌ ಕಾರ್ಡ್‌ ಮಾಡಿಸಿ 10 ವರ್ಷಕ್ಕಿಂತ ಜಾಸ್ತಿಯಾಗಿರುವವರು ಅದನ್ನು ಉಚಿತವಾಗಿ ಅಪ್ಡೇಟ್‌ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಒಮ್ಮೆಯೂ ಅಪ್ಡೇಟ್‌ ಮಾಡಿಸದೇ ಇರುವವರು ಜೂನ್‌ 14ರ ಒಳಗೆ ಅಪ್ಡೇಟ್‌ ಮಾಡಿಸಿಕೊಳ್ಳಿ.
ಆಧಾರ್ ಕಾರ್ಡ್ ಹೊಂದಿರುವವರು ಮುಂದಿನ 8 ದಿನಗಳಲ್ಲಿ (ಜೂ.14) ತಮ್ಮ ಆಧಾರ್ ವಿವರಗಳನ್ನು (ಹೆಸರು, ವಿಳಾಸ, ಜನ್ಮದಿನಾಂಕ ಇತ್ಯಾದಿ ಬದಲಾವಣೆ) ಉಚಿತವಾಗಿ ನವೀಕರಿಸಬಹುದು. ಏಕೆಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ನಾಗರಿಕರಿಗೆ ತಮ್ಮ ಆಧಾರ್‌ನಲ್ಲಿನ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಶುಲ್ಕ ವಿಧಿಸುವುದಿಲ್ಲ. ಜೂ.14 ರ ನಂತರ ಆಧಾರ್‌ ಅಪ್ಡೇಟ್‌ ಮಾಡುವವರು ಶುಲ್ಕ ಪಾವತಿಸಬೇಕಾಗುತ್ತಿದೆ.
ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾರ್‌ ಅಪ್ಡೇಟ್‌ ಮಾಡುವ ಸೇವೆಯ ಲಾಭವನ್ನು ಪಡೆಯಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ.
“ನಿಮ್ಮ ಆಧಾರ್‌ ವಿವರಗಳನ್ನು ಆನ್‌ಲೈನ್‌ನಲ್ಲಿ  https://myaadhaar.uidai.gov.inನಲ್ಲಿ ಮಾರ್ಚ್‌ 15 ರಿಂದ ಜೂನ್ 14 ರ ವರೆಗೆ ಉಚಿತವಾಗಿ ನವೀಕರಿಸಬಹುದು” ಎಂದು ಯುಐಡಿಎಐ ಟ್ವೀಟ್‌ ಮಾಡಿದೆ.
50 ರೂ. ಶುಲ್ಕ: ಜೂ.14 ರ ವರೆಗೆ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು. ನಂತರ ನೀವು ಆಧಾರ್‌ ಅಪ್ಡೇಟ್‌ ಮಾಡಲು 50 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆನ್‌ಲೈನ್‌ ಮೂಲಕವೋ ಅಥವಾ ಸ್ಥಳೀಯ ಆಧಾರ್ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್‌ ವಿವರಗಳನ್ನು ನವೀಕರಿಸಲು ಅವಕಾಶ ಇದೆ.
ಆಧಾರ್‌ ವಿವರ ಅಪ್ಡೇಟ್‌ ಮಾಡೋದು ಹೇಗೆ?
https://myaadhaar.uidai.gov.in/  ಲಾಗಿನ್‌ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್ ಹಾಕಿ,  ಎಂಟರ್ ಮಾಡಿ, Seಟಿಜ ಔಖಿP ಬಟನ್ ಮೇಲೆ ಕ್ಲಿಕ್ ಮಾಡಿ, OTP enter ಮಾಡಿ ಲಾಗಿನ್ ಆಗಿ. Document Update Option Select ಮಾಡಿ, ನಿಮ್ಮ ಡೀಟೇಲ್ಸ್ ಅಪ್ಡೇಟ್ ಮಾಡಿ ಮತ್ತು ಅದಕ್ಕೆ ಬೇಕಾದ Documents  ಅಪ್ಲೋಡ್ ಮಾಡಿ.///////