Belagavi News In Kannada | News Belgaum

50 ಅಡಿ ಬ್ರಿಡ್ಜ್ ಮೇಲಿಂದ ಉರುಳಿ ಬಿದ್ದ ಲಾರಿ

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಲಾರಿವೊಂದು ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಮೇಲಿಂದ ಬಿದ್ದಿರುವ ಘಟನೆ ಎಕೆ ಹುಬ್ಬಳ್ಳಿ ಸಮೀಪದಲ್ಲಿ ನಡೆದಿದೆ.

ಅಪಘಾತದಲ್ಲಿ ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಳಗಾವಿ  ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಗ್ರಾಮದ ಬಳಿಯ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಂದಾಜು 50 ಅಡಿ ಬ್ರಿಡ್ಜ್ ಮೇಲಿಂದ ಕ್ಯಾಂಟರ್ ಉರುಳಿ ಬಿದ್ದಿದೆ. ಆದರೂ ಪವಾಡಸದೃಶವಾಗಿ ಬದುಕುಳಿದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಹಾರಾಷ್ಟ್ರ ಮೂಲದ ರಾಮದಾಸ್ ಗೋಡೆ (42) ಸದ್ಯ ಬದುಕುಳಿದ ಚಾಲಕ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲಿಂದ ನದಿಗೆ ಕ್ಯಾಂಟರ್ ವಾಹನ ಉರಿಳಿದ್ದು ಚಿಕ್ಕಮಗಳೂರಿನಿಂದ ಮಹಾರಾಷ್ಟ್ರಕ್ಕೆ ಕಟ್ಟಿಗೆ ಹೊತ್ತೊಯ್ಯುತ್ತಿದ್ದಾಗ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೆಳಗಾವಿಯ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ./////