Belagavi News In Kannada | News Belgaum

ಪಶು ಇಲಾಖೆ ಸಾತ್ವಿಕ ನಾಯಿಕ ರವರ ಬಿಳ್ಕೊಡುಗೆ

ಹುಕ್ಕೇರಿ: ಪಶು ಇಲಾಖೆ ಸಾತ್ವಿಕ ನಾಯಿಕ ಇವರ ಬಿಳ್ಕೊಡುಗೆ ಸಮಾರಂಭ ಶಾಸಕ ನಿಖಿಲ್ ಕತ್ತಿ ಆಗಮನ.ಹೌದು ಹುಕ್ಕೇರಿ ತಾಲೂಕಿನ ಪಶು ಇಲಾಖೆಯಲ್ಲಿ ೨೭ ವರ್ಷ ಸೇವೆ ಸಲ್ಲಿಸಿ ನಿವ್ರತ್ತರಾಗಿ.ಉತ್ತಮ ದಕ್ಷ ನಿಷ್ಪಕ್ಷಪಾತವಾಗಿ ಹುಕ್ಕೇರಿಯ ಪಶು ಇಲಾಖೆಯಲ್ಲಿ ಕಪ್ಪು ಚುಕ್ಕೆ ಇಲ್ಲದೆ, 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಎಷ್ಟೋ ರೋಗಗಳಿಂದ ಬಳಲುತ್ತಿದ್ದ ದನ ಕರು ಆಕಳು ಎಮ್ಮೆ ನಾಯಿ ಹೀಗೆ ಅನೇಕ ಪಶು ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮೂಕ ಪ್ರಾಣಿಗಳಿಗೆ ಜೀವ ನೀಡಿ ಉಸಿರು ತುಂಬಿಸಿ ತಾಲೂಕಿನ ರೈತ ಜನರಿಗೆ ಹಾಗೂ ಸಾರ್ವಜನಿಕರಿಗೆ ಮಾದರಿಯಾಗಿ ಸೇವೆ ಸಲ್ಲಿಸಿ ಅನೇಕ ಬಡವರಿಗೂ ಕೂಡಾ ಸಹಾಯ ಮಾಡಿ ಇಂದು ಸೇವೆಯಿಂದ ನಿವ್ರತ್ತರಾಗಿ ಬಿಳ್ಕೋಡುವ ಸಮಾರಂಬ ಅದ್ದೂರಿಯಾಗಿ ಜರುಗಿತು ಇವರಿಗೆ ತಾಲೂಕಿನ ಜನ ಹೂಗುಚ್ಚ ಶಾಲು ಮಾಲೆ ಹಾಕಿ ಬಿಳ್ಕೊಟ್ಟರು ಈ ಸಂದರ್ಭದಲ್ಲಿ ಪಶು ಇಲಾಖೆಗೆ ಗೋ ಮಾತೆಯ ಮಾಡಲ್ ಗೊಂಬೆಯನ್ನ ದೇಣಿಗೆ ನಿಡಿದರು ಪುಣ್ಯಕೊಟಿ ಗೋ ಮಾತೆ ಕರುವಿಗೆ ಹಾಲುಣಿಸುವ ಚಿತ್ರದ ಮೂರ್ತಿಯನ್ನು ದೇಣಿಗೆ ನೀಡಿದರು ಇದನ್ನ ಉದ್ಘಾಟಿಸಿ ಮಾತನಾಡಿದ ನಿಖಿಲ್ ಕತ್ತಿ ಒಳ್ಳೆಯ ಕೆಲಸ ನಿರ್ವಹಿಸಿ ಮಾದರಿಯಾದವರಿಗೆ ಧನ್ಯವಾದ ಹೇಳಿದರು ನಂತರ ಮತ್ತೆ ಸ್ವ ಇಚ್ಛೆಯಿಂದ ಸೇವೆ ಸಲ್ಲಿಸಿ ಮತ್ತೆ ಸಾರ್ವಜನಿಕರಿಗೆ ಅನೂಕೂಲ ಮಾಡಿ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಹುಕ್ಕೆರಿ ತಾಲೂಕಾಡಳಿತ ಅಧಿಕಾರಿಗಳು ಮುಖಂಡರುಗಳು ಸತ್ಯಪ್ಪನಾಯಿಕ ಬೆಳವಿ ಪಶು ಇಲಾಖೆ ಕದಮ್ ಅರಣ್ಯ ಇಲಾಖೆ ಬೆಲ್ಲದ ಹಾಗೂ ಅನೇಕ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೇ ಹುಕ್ಕೇರಿ ತಾಲೂಕಿನ ಪತ್ರಕರ್ತರ ವತಿಯಿಂದ ಸತ್ಕಾರ ಮಾಡಿದರು.ವರದಿ ಬ್ರಹ್ಮಾನಂದ ಪತ್ತಾರ.