ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್ ಬಗ್ಗೆ ತಿರಿಚುವ ಕೆಲಸ ಬಿಜೆಪಿ ಮಾಡಿದೆ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಬಿಜೆಪಿ ನೈಜ್ಯ ಸಂಗತಿ ತಿರಿಚುವಂತ ಪ್ರಯತ್ನ ಬಿಜೆಪಿ ಮಾಡಿದೆ. ಬಸವಣ್ಣವರು, ಅಂಬೇಡ್ಕರ್ ಅವರ ಬಗ್ಗೆ ತಿರುಚುವಂತ ಪ್ರಯತ್ನ ಮಾಡಿದೆ. ಅದನ್ನು ಬದಲಾವಣೆ ಮಾಡುವೆವು ಅಂತಾ ಮುಂಚೆ ಕೂಡ ಹೇಳಿದ್ದೇವು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಿಪ್ಪಾಣಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ನಾವು ತಜ್ಞರನ್ನು ಕೇಳಿಯೇ ಪರಿಷ್ಕರಣ ಮಾಡುತ್ತೇವೆ. ತಜ್ಞರ ಸಮೀತಿ ನೇಮಿಸುತ್ತೇವೆ. ಯಾವುದು ಮಾಡಬೇಕು ಇಲ್ಲವೋ ಎಂದು ತಜ್ಞರ ಮೂಲಕ ತಿಳಿದುಕೊಂಡು ಮಾಡುತ್ತೇವೆ ಎಂದು ಹೇಳಿದರು.
ಗೋ ಹತ್ಯೆ ನಿಷೇಧ ಕಾನೂನು ಹಿಂಪಡೆಯುವ ವಿಚಾರವಾಗಿ ಮಾತನಾಡಿದ ಅವರು, ನಾವು ಮನೆ ಮನೆಗೆ ಹೋಗಿ ಜನರನ್ನ ಈ ಕಾನೂನಿನ ಬಗ್ಗೆ ಕೇಳುತ್ತೇವೆ. ಅವರಿಗೆ ಇದು ಬೇಕೊ ಬೇಡವೋ ಎಂದು ಕೇಳಿ ತಿಳಿದುಕೊಳ್ಳುತ್ತೇವೆ. ಬಹುಮತದ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಅದರ ಪ್ರಕಾರ ನಡೆದುಕೊಳ್ಳುವೆವು ಎಂದರು./////