Belagavi News In Kannada | News Belgaum

ಹೃದಯಾಘಾತದಿಂದ ಸರ್ಕಲ್​ ಇನ್ಸ್​ಪೆಕ್ಟರ್ ನಿಧನ

ಚಿತ್ರದುರ್ಗ: ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇರುವ ಕಳವಳಕಾರಿಯಾಗಿದೆ. ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ, ನಟ ನಿರ್ದೇಶಕ ನಿತಿನ್​ ಗೋಪಿ, ಬೆಳ್ತಂಗಡಿ ಮೂಲದ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಕೆಲವು ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಬಲಿಯಾದರೂ ಇದೀಗ ಸರ್ಕಲ್ ಪೊಲೀಸ್​ ಇನ್ಸ್​ಪೆಕ್ಟರ್ ಒಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಲಿಂಗರಾಜ್‌ (39) ಹೃದಯಾಘಾತದಿಂದ ನಿಧನರಾದ ಸಿಪಿಐ. ಚಿತ್ರದುರ್ಗ ಮೂಲದ ಲಿಂಗರಾಜ್​, ಬೆಂಗಳೂರಿನಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಪಿಎಸ್​ಐ ಆಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ. ನಿನ್ನೆ ಬೆಂಗಳೂರಿಂದ ಚಿತ್ರದುರ್ಗ ನಗರಕ್ಕೆ ಆಗಮಿಸಿದ್ದರು. ಖಾಸಗಿ ಲಾಡ್ಜ್ (ನವೀನ್ ರೆಸಿಡೆನ್ಸಿ)ನಲ್ಲಿ ವಾಸ್ತವ್ಯ ಹೂಡಿದ್ದರು.
ಇಂದು (ಜೂ. 8) ಬೆಳಗ್ಗೆ ಎದೆನೋವು ಎಂದು ನಗರದ ಬಸವೇಶ್ವರ ಆಸ್ಪತ್ರೆಗೆ ತೆರಳುವ ವೇಳೆ ಮಾರ್ಗಮಧ್ಯೆಯೇ ಲಿಂಗರಾಜ್​ ಮೃತಪಟ್ಟಿದ್ದಾರೆ.
ಲಿಂಗರಾಜ್​ 2007ರ ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಕಡೂರು, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಲಿಂಗರಾಜ್​ ಸೇವೆ ಸಲ್ಲಿಸಿದ್ದಾರೆ./////