ವ್ಯಕ್ತಿ ನಾಪತ್ತೆ

ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ರಾಮಾಪೂರ ತಾಂಡಾ ಗ್ರಾಮದ ವ್ಯಕ್ತಿ ಸಚೀನ್ ಶಂಕರ ರಜಪೂತ (16) ಇವನು ಜೂ. 5 2023 ರಂದು ಸಂಜೆ 4.30 ರ ಸುಮಾರಿಗೆ ಬಟ್ಟೆ ಖರೀದಿ ಮಾಡಿಕೊಂಡು ಬರುತ್ತೇನೆ ಅಂತಾ ಮನೆಯಿಂದ ಹೋಗಿ ಕಾಣೆಯಾಗಿರುತ್ತಾನೆ ಎಂದು ತಂದೆ ಶಂಕರ ರಾಮಪ್ಪ ರಜಪೂತ ಅವರು ನಗರದ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ:
ಸಾಧಾರಣ ಮೈಕಟ್ಟು, ಗೋದಿಗೆಂಪು ಮೈಬಣ್ಣ, ಅಗಲ ಮುಖ, ಅಗಲ ಹಣೆ, ಸಾಧಾರಣ ಮೂಗು, ಎತ್ತರ ಸುಮಾರು 5.6 ಇಂಚು ಇರುತ್ತಾನೆ. ಕಪ್ಪು ಬಣ್ಣದ ಕಾಟನ್ ಪ್ಯಾಂಟ್, ಕಪ್ಪು ಬಣ್ಣದ ಶರ್ಟ್‍ನಲ್ಲಿ ಬಿಳಿ ಚುಕ್ಕಿಗಳಿರುವ ಕಾಟನ್ ಶರ್ಟ್ ಧರಿಸಿರುತ್ತಾನೆ. ಬಲಗೈ ಮೊನಕೈ ಕೆಳಗೆ ಆಪರೆಷನ್ ಮಾಡಿದ ಹಳೆ ಗಾಯದ ಗುರುತು ಇರುತ್ತದೆ ಹಾಗೂ ಕನ್ನಡ, ಹಿಂದಿ, ಮರಾಠಿ, ಲಂಬಾಣಿ ಭಾಷೆ ಬಲ್ಲವರಾಗಿರುತ್ತಾರೆ.
ಸದರಿ ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೆಳಗಾವಿಯ ಖಡೇಬಜಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅಥವಾ ಪೊಲೀಸ ಠಾಣೆ ಫೋನ್ ನಂ (0831) 2405232, 9480804050 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಖಡೇಬಜಾರ ಪೊಲೀಸ್ ಠಾಣೆಯ ಠಾಣಾಧಿಕಾರಿ (ಪಿಎಸ್) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////