Belagavi News In Kannada | News Belgaum

ಬಾಂದೂರ ಗಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಹಾಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅನಿಲ ಬೆನಕೆ

ಬೆಳಗಾವಿ : ದಿನಾಂಕ 09.06.2023 ರ ಶುಕ್ರವಾರದಂದು ಬೆಳಗಾವಿ ನಗರದ ಬಾಂದೂರ ಗಲ್ಲಿಯಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ 30 ವರ್ಷ ಪೂರೈಸಿರುವ ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಪೂಜೆ ಪುನಸ್ಕಾರಗಳು, ಮಹಾಭಿಷೇಕ, ಹೋಮ ಹಾಗೂ ಮಹಾಪ್ರಸಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಮಾಜಿ ಶಾಸಕರಾದ ಅನಿಲ ಬೆನಕೆರವರು ದೇವಸ್ಥಾನಕ್ಕೆ ಬೇಟಿ ನೀಡಿ ಶ್ರೀ ಮಹಾಲಕ್ಷ್ಮೀ ದೇವಿಯ ಆಶಿರ್ವಾದವನ್ನು ಪಡೆದುಕೊಂಡು ದೇವಿಯು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.

ನಂತರದಲ್ಲಿ ಮಹಾಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಕ್ತಾಧಿಗಳಿಗೆ ಪ್ರಸಾದವನ್ನು ಬಡಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಅನಿಲ ಬೆನಕೆ, ನಗರ ಸೇವಕಿ ವೈಶಾಲಿ ಸಿದ್ದಾರ್ಥ ಭಾತಖಂಡೆ, ರಾಜು ಮೋದಗೇಕರ, ಮಹಾದೇವ ಜಾಧವ, ಯಶವಂತ ಜಾಧವ, ಅಜೀತ ಜಗತಾಪ, ಮನೋಹರ ಪಾಟೀಲ ಹಾಗೂ ಇತರ ಪಂಚಕಮೀಟಿ ಸದಸ್ಯರು, ಮುಖಂಡರುಗಳು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು./////