Belagavi News In Kannada | News Belgaum

ಉಚಿತ ಪ್ರಯಾಣಕ್ಕೆ ಚಾಲನೆ ನೀಡಿ ತಾವೇ ಬಸ್ ಚಲಾಯಿಸಿದ ಸ್ವಾಮೀಜಿ

ವಿಜಯಪುರ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಡಕ್ಟರ್ ರೀತಿ ತಾವೇ ಟಿಕೆಟ್ ಕೊಟ್ಟು ಯೋಜನೆಗೆ ಚಾಲನೆ ನೀಡಿದ್ದರು.
ಮತ್ತೊಂದೆಡೆ ಸ್ವಾಮೀಜಿಯೊಬ್ಬರು ಕೂಡ ಈ ಯೋಜನೆಯ ಚಾಲನೆ ಸಂದರ್ಭದಲ್ಲಿ ತಾವೇ ಸರ್ಕಾರಿ ಬಸ್ ಚಲಾಯಿಸಿದ ಘಟನೆ  ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಕೊಲ್ಹಾರದ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ಸ್ವಾಮೀಜಿ ಬಸ್ ಚಲಾಯಿಸಿದವರು. ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದ ಇವರು, ಅಧಿಕಾರಿಗಳ ಸಮ್ಮುಖದಲ್ಲಿ ತಾವೇ ಕೊಲ್ಹಾರ ಪಟ್ಟಣವನ್ನು ಸುತ್ತಾಡಿಸಿದ್ದಾರೆ. ಸ್ವಾಮೀಜಿ ಸುಮಾರು 5 ಕಿ.ಮೀ. ದೂರ ಬಸ್ ಚಲಾಯಿಸಿದ್ದು, ಬಸ್​ನಲ್ಲಿದ್ದವರು ಕೆಲಕಾಲ ಆತಂಕದಲ್ಲಿ ಇದ್ದಿದ್ದೂ ಕಂಡುಬಂತು./////