ಗೋಕಾಕ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಳಗಾವಿ, ಜೂ.14 : ಗೋಕಾಕ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 16 ಅಂಗನವಾಡಿ ಕಾರ್ಯಕರ್ತೆಯರ ಮತ್ತು 32 ಸಹಾಯಕಿಯರ ಹುದ್ದೆಗಳಿಗಾಗಿ ,19 ರಿಂದ 35 ವರ್ಷದೊಳಗಿನ ಅರ್ಹ ಮಹಿಳಾ ಮತ್ತು ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಲಕೋಟೆಯಲ್ಲಿ ಶೀಲ್ಡ್ ಮಾಡಿ ಜುಲೈ. 13 2023 ರ ಸಂಜೆ 5 30 ರೊಳಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಮಿನಿ ವಿಧಾನಸೌಧ ರಸ್ತೆ ವಿಶ್ವೇಶ್ವರಯ್ಯ ಬ್ಯಾಂಕ್ ಹತ್ತಿರ ಗೋಕಾಕದಲ್ಲಿ ಶೀಲ್ಡ್ ಮಾಡಿ ಇಡಲಾದ ಪೆಟ್ಟಿಗೆಯಲ್ಲಿ ಹಾಕಬೇಕು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಗೋಕಾಕ ನೋಟಿಸ ಬೋರ್ಡಿನ ಮೇಲೆ, ಆಯಾ ಗ್ರಾಮಗಳ ಗ್ರಾಮ ಪಂಚಾಯತ ಹಾಗೂ ಪ್ರಾಥಮಿಕ ಶಾಲಾ ಅಂಗನವಾಡಿ ಶಾಲಾ ಕೇಂದ್ರಗಳ ನೋಟಿಸ ಬೋರ್ಡಿನ ಮೇಲೆ ಹೊರಡಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಛೇರಿ, ಗೋಕಾಕ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08332-226365 ರ ಮುಖಾಂತರ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಗೋಕಾಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.