ಸರ್ಕಾರಿ ಶಾಲೆಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲು ಆದ್ಯತೆ : ಶಾಸಕ ನಿಖಿಲ್ ಕತ್ತಿ

ಹುಕ್ಕೇರಿ : ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು..
ತಾಲೂಕಿನ ಸಾರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ-ಸಮವಸ್ತ್ರ ವಿತರಣೆ, ಪರಿಸರ ದಿನಾಚರಣೆ ಹಾಗೂ ಶಾಲಾ ಪ್ರವೇಶ ಧ್ವಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು..
ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಸಶಕ್ತಗೊಳಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಉದ್ಯೋಗ ಖಾತರಿಯಡಿ ಆಟದ ಮೈದಾನ ನಿರ್ಮಾಣ, ಫೇವರ್ಸ್ ಅಳವಡಿಕೆ, ಹೈಟೆಕ್ ಶೌಚಾಲಯ, ಕಂಪೌಂಡ್, ಭೋಜನಾಲಯ, ಕೊಠಡಿ ದುರಸ್ತಿ, ಹೊಸ ಕೋಣೆಗಳ ನಿರ್ಮಾಣ ಹೀಗೆ ಹಲವು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು..
ಪ್ರತಿಯೊಬ್ಬರೂ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಸಸಿ ನೆಟ್ಟು ಪೋಷಿಸಬೇಕು. ಪರಿಸರ ಕಾಳಜಿಗೆ ಪ್ರಥಮ ಪ್ರಾಮುಖ್ಯತೆ ನೀಡಬೇಕು. ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ತನ್ಮೂಲಕ ದೇಶದ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಅವರು ಕಿವಿಮಾತು ಹೇಳಿದರು..
ಕ್ಷೇತ್ರಕ್ಕೆ ಹೊಸದಾಗಿ ಆಯ್ಕೆಯಾಗುವ ಮೂಲಕ ಮತದಾರರು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ. ಜನರ ಸಹಕಾರದಿಂದ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ರೂಪಿಸಲು ಪಣ ತೊಡಲಾಗಿದೆ. ಕೇಂದ್ರ ಮತ್ತು ರಾಜ್ಯದ ಅನುದಾನ ತಂದು ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು..
ಕ್ಯಾರುಗುಡ್ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಯಲ್ಲಪ್ಪಾ ಡಪರಿ ಅಧ್ಯಕ್ಷತೆ ವಹಿಸಿದ್ದರು.
ಬಿಇಒ ಮೋಹನ ದಂಡಿನ್, ಆರ್‍ಎಫ್‍ಒ ಪ್ರಸನ್ ಬೆಲ್ಲದ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ರವಿ ಕಾಂಬಳೆ, ಮುಖಂಡರಾದ ಸತ್ಯೆಪ್ಪಾ ನಾಯಿಕ, ಸತಿಗೌಡ ಪಾಟೀಲ, ಸತ್ಯೆಪ್ಪಾ ಹಾಲಟ್ಟಿ, ಪಾರೇಶ ಬೆಳವಿ, ರಾಮಣ್ಣಾ ಗೋಟೂರೆ, ಶಂಕರ ಬಡಗಾಂವಿ, ಸಿದ್ಧಪ್ಪಾ ಪೂಜೇರಿ, ಪುಟ್ಟು ಚೌಗಲಾ, ಆನಂದ ದಪ್ಪಾದೂಳಿ, ಸಂಜು ಬಸ್ತವಾಡ, ರವಿ ಸನದಿ, ರಾಮಗೌಡ ಹೆಬ್ಬಾಳ, ಬಾಳಾಸಾಹೇಬ ನಾಯಿಕ, ಮಂಜು ಪಡದಾರ, ದುಂಡಪ್ಪ ಹುಂಜಿ, ಸಂತೋಷ ಹಟ್ಟಿ, ಬಸವರಾಜ ಹಾಲಟ್ಟಿ, ಶಿಕ್ಷಕರಾದ ಕೆ.ಕೆ.ಮೊಖಾಶಿ, ಶಿವಶಾಂತ ಕಾಂಬಳೆ, ರೂಪಾ ತಳವಾರ, ಸರೀತಾ ಕಾಂಬಳೆ, ದುಂಡಪ್ಪಾ ಗುಡದಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಎಸ್.ಎಸ್.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಎಸ್.ಜಿ.ತುಪ್ಪದ ನಿರೂಪಿಸಿದರು. ಪಿಡಿಒ ಸಂತೋಷ ಕಬ್ಬಗೋಳ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಎಸ್.ಟಿ.ಮನ್ನಿಕೇರಿ ವಂದಿಸಿದರು.