Belagavi News In Kannada | News Belgaum

ಅಕ್ರಮ ಅರಣ್ಯದಲ್ಲಿರುವ ಕಟ್ಟಿಗೆ ಸಾಗಣೆ ಪ್ರಕರಣ; ಆರ್.ಎಫ್.ಒ ಅಮಾನತು

 

(ಬೆಳಗಾವಿ ವರದಿ ದಿನಪತ್ರಿಕೆ )ಮುಂಡಗೋಡ:  ಇಲ್ಲಿನ ಸರ್ಕಾರಿ ಮರಮಟ್ಟು ಸಂಗ್ರಹಾಲಯದಿಂದ ಅಕ್ರಮವಾಗಿ ಸಾಗವಾನಿ ಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಮಟ್ಟು ಸಂಗ್ರಹಾಲಯದ ಆರ್.ಎಫ್.ಒ ಜಿ.ಟಿ.ರೇವಣಕರ್ ಅವರನ್ನು ಅಮಾನತುಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿ.ಸಿ.ಸಿ.ಎಫ್.) ಬುಧವಾರ ಆದೇಶಿಸಿದ್ದಾರೆ..

ಮುಂಡಗೋಡ ಮರಮಟ್ಟು ಸಂಗ್ರಹಾಲಯದಿಂದ ಅಕ್ರಮವಾಗಿ ಸಾಗವಾನಿ ದಿಮ್ಮಿಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಜೂನ್ 10 ರಂದು ಶಿರಸಿ ತಾಲ್ಲೂಕಿನ ಎಕ್ಕಂಬಿ ಚೆಕ್‍ಪೋಸ್ಟ್ ನಲ್ಲಿ ಪತ್ತೆ ಹಚ್ಚಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಗ್ರಹಾಲಯದ ಐದು ಮಂದಿ ಡಿ.ಆರ್.ಎಫ್.ಒ.ಗಳನ್ನು ಕೆನರಾ ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ (ಸಿ.ಎಫ್.) ಕೆ.ವಿ.ವಸಂತ ರೆಡ್ಡಿ ಅಮಾನತುಗೊಳಿಸಿ ಆದೇಶಿಸಿದ್ದರು..

‘ಮೇಲ್ನೋಟಕ್ಕೆ ಅಧಿಕಾರಿಗಳ ಕರ್ತವ್ಯಲೋಪ ಎದ್ದು ಕಾಣುತ್ತಿರುವ ಕಾರಣಕ್ಕೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅದನ್ನು ಆಧರಿಸಿ ಪಿ.ಸಿ.ಸಿ.ಎಫ್. ಅಮಾನತುಗೊಳಿಸಿ ಆದೇಶಿಸಿದ್ದಾರೆ’ ಎಂದು ಸಿ.ಎಫ್. ಕೆ.ವಿ.ವಸಂತರೆಡ್ಡಿ ತಿಳಿಸಿದ್ದಾರೆ.‌.