ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್ ಪ್ರಾರಂಭ

ಬೆಳಗಾವಿ, ಜೂ.17 : 2023-24 ನೇ ಸಾಲಿನಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್ ಪಡೆಯಲು ಸೇವಾ ಸಿಂಧು ಪೋರ್ಟಲ್‍ನಲ್ಲಿ ಅರ್ಜಿಗಳನ್ನು ದಾಖಲಿಸುವ ಪ್ರಕ್ರಿಯೆಯು ಜೂ.12 2023 ರಿಂದ ಪ್ರಾರಂಭವಾಗಿದೆ.
ಪ್ರಸಕ್ತ ವರ್ಷದಲ್ಲಿ ಸರ್ಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಬಸ ಪಾಸಗಳನ್ನು ವಿತರಿಸಲಾಗುವುದು. ಪಾಸು ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ID URL- https://sevasindhuservices.karnataka.gov.in/buspassservices ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು , ಗ್ರಾಮ-ಒನ್, ಕೇಂದ್ರಗಳಲ್ಲಿ ಆನ್‍ಲೈನ್ ಪಾಸ್ ಅರ್ಜಿಗಳನ್ನು ಸಲ್ಲಿಸಲು 30 ರೂ ಸೇವಾ ಶುಲ್ಕ ಇರುತ್ತದೆ, ಅರ್ಜಿಯನ್ನು ಸಲ್ಲಿಸಿದ ಸ್ವೀಕೃತಿ ಪ್ರತಿಯೊಂದಿಗೆ ಪಾಸಿನ ಶುಲ್ಕ ಪಾವತಿಸಿ ಪಾಸ್ ಕೌಂಟರಗಳಲ್ಲಿ ಪಾಸ್ ಪಡೆಯಬಹುದಾಗಿದೆ.
ಬೆಳಗಾವಿ ವಿಭಾಗದ ವಿವಿಧ ಪಾಸ್ ಕೌಂಟರಗಳು
ಬೆಳಗಾವಿ ಕೇಂದ್ರ ಬಸ್ ನಿಲ್ದಾಣ-03, ಬೈಲಹೊಂಗಲ ಬಸ್ ನಿಲ್ದಾಣ-1, ಖಾನಾಪುರ ಬಸ್ ನಿಲ್ದಾಣ-1, ಕಿತ್ತೂರ ಬಸ್ ನಿಲ್ದಾಣ-1, ಒಟ್ಟು 06 ಪಾಸ್ ಕೌಂಟರಗಳನ್ನು ತೆರೆಯಲಾಗಿದ್ದು ಹಾಗೂ ಬೆಳಗಾವಿ-ಒನ್ ಕೇಂದ್ರ ಅಶೋಕನಗರ ಬೆಳಗಾವಿಯಲ್ಲಿ ಸಹ ಪಾಸ್‍ಗಳನ್ನು ಪಡೆಯಬಹುದಾಗಿದೆ.
ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿಸಿದ ದೂರು ಸಲಹೆಗಳಿಗಾಗಿ ದೂರವಾಣಿ ಸಂಖ್ಯೆ 8792662814, 8792662816, 9844605021 ಗೆ ಹಾಗೂ ಇ-ಮೇಲ್ :sevasindhu@karnataka.gov.in ಗೆ ಸಂಪರ್ಕಿಸಬಹುದಾಗಿದೆ.
ಪಾಸ್ ವಿತರಣಾ ಕೇಂದ್ರಗಳಲ್ಲಿ ಪಾಸ್ ಕಾರ್ಡ್‍ನ ಮುದ್ರಣ & ವಿತರಣೆಗೆ ಸಂಬಂಧಿಸಿದ ದೂರು ಸಲಹೆಗಳಿಗಾಗಿ ದೂರವಾಣಿ ಸಂಖ್ಯೆ 8904085030, 9632418969 ಗೆ ಹಾಗೂ ಇ-ಮೇಲ್ onehelpdesk@karnataka.gov.in ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.