ಅಗ್ನಿಪತ್ ಸೇನಾ ಭರ್ತಿ ಕುರಿತು ಯುವಕರಲ್ಲಿ ಮಾಹಿತಿ ನೀಡಿದ ಮೇಜರ್ ರಾಜು ಹುದ್ದಾರ

ಬೆಳಗಾವಿ, ಜೂ.17 ಯುವಕರು ಅಗ್ನಿಪತ ಸೇನೆ ಭರ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ದೇಶ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ದೇಶ ಸೇವೆ ಪುಣ್ಯದ ಕಾಯಕವಾಗಿದೆ ಹಾಗಾಗಿ ಯುವಕರು ಆಗ್ನಿಪತ ಸೇನಾ ಭರ್ತಿಹೊಂದಿ ಸೇವೆ ಸಲ್ಲಿಸಬೇಕು ಎಂದು ಸೇನಾಧಿಕಾರಿ ಸುಬೇದಾರ್ ಮೇಜರ್ ರಾಜು ಹುದ್ದಾರ ಅವರು ತಿಳಿಸಿದರು.
ಬೆಳಗಾವಿಯ ಸರಕಾರಿ ಮಹಿಳಾ ಐಟಿಐ ಕಾಲೇಜಿನಲ್ಲಿ ಶನಿವಾರ (ಜೂ.17) ಅಗ್ನಿಪತ ಯೋಜನೆಯಲ್ಲಿ ಭಾರತೀಯ ಸೇನೆಯನ್ನು ಸೇರಲು ಇರುವ ತಾಂತ್ರಿಕ ಕುರಿತು ಸೇನಾಧಿಕಾರಿಯಾದ ಸುಬೇದಾರ್ ಮೇಜರ್ ರಾಜು ಹುದ್ದಾರ ಅವರು ಮಾಹಿತಿ ನೀಡಿದರು.
ಜೊತೆಯಲ್ಲಿ (ಓ. ಆ. ಂ), (SSಃ), (Iಒಂ) ಮತ್ತು ಮಹಿಳಾ ಮಿಲಟರಿ ಪೆÇಲೀಸ್ ಸೇರಿಕೊಳ್ಳಲು ಬೇಕಾಗುವ ಅರ್ಹತೆ ಮತ್ತು ದಾಖಲಾತಿಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು, ಕಾಲೇಜಿನ ಪ್ರಿನ್ಸ್ ಪಾಲರಾದ ಚಿದಾನಂದ ಬಾಕೇ ಮತ್ತು ಅವರ ಸಹದ್ಯೋಗಿಗಳು ಉಪಸ್ಥಿತರಿದ್ದರು.