ಬಸ್ ಹತ್ತಲು ಹೋಗಿ ಬಾಗಿಲನ್ನೇ ಮುರಿದ ಮಹಿಳಾಮಣಿಗಳು

ಮಂಡ್ಯ: ಫ್ರೀ ಶಕ್ತಿ ಯೋಜನೆಯ ಎಫೆಕ್ಟ್ ರಾಜ್ಯದ ಎಲ್ಲಾ ಸಾರಿಗೆ ಕೆಂಪು ಬಸ್‌ಗಳಿಗೂ ತಟ್ಟಿದೆ. ಉಚಿತ ಸಾರಿಗೆ ಪ್ರಯಾಣ ಶುರುವಾಗಿದ್ದೇ ಆಗಿದ್ದು, ಮಹಿಳೆಯರ ಕಾಲು ಮನೆಯಲ್ಲಿ ನಿಲ್ಲುತ್ತಿಲ್ಲ. ಇಂದು ಮಹಿಳೆಯರು ಬಸ್ ಹತ್ತಲು ಹೋಗಿ ಬಸ್ಸಿನ ಬಾಗಿಲು ಕಿತ್ತು ಹಾಕಿ ಬಸ್ ಎರಿದ ಘಟನೆ ಜಿಲ್ಲೆಯ ಮಳವಳ್ಳಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ..
ದಿನದಿಂದ ದಿನಕ್ಕೆ ಮಹಿಳೆಯರ ಪ್ರವಾಸ ಜೋರಾಗಿದೆ. ಉಚಿತ ಬಸ್ ಇದ್ದ ಕಾರಣ ರಾಜ್ಯದ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ. ಇದೇ ಹಿನ್ನಲೆಯಲ್ಲಿ ಇಂದು ಮಹಿಳೆಯರು ಬಸ್ನಲ್ಲಿ ಕುಳಿತುಕೊಳ್ಳಲು ಸೀಟ್ ಹಿಡಿಯುಲು ಮುಂದಾಗಿದ್ದರು. ಈ ವೇಳೆ ಹೆಚ್ಚಿನ ತಳ್ಳಾಟ-ನೂಕಾಟ ಉಂಟಾದ ಪರಿಣಾಮ ಬಸ್ ಬಾಗಿಲು ಮುರಿದು ಹೋಗಿದೆ. ಇನ್ನು ಬಾಗಿಲು ಕಿತ್ತು ಬಂದ ಕಾರಣ ಸಾರಿಗೆ ಸಿಬ್ಬಂದಿ ಬಸ್ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಬಳಿಕ ಕಿತ್ತು ಹೋದ ಡೋರ್ ಅನ್ನು ಬಸ್ಸಿನ ಕಂಡಕ್ಟರ್ ಟಿಸಿಗೆ ಹಸ್ತಾಂತರಿಸಿದ್ದಾರೆ..